ದಾವಣಗೆರೆ: ದಾವಣಗೆರೆ ತಾಲ್ಲೂಕಿನ 66/11 ಕೆವಿ ಯರಗುಂಟೆ ವಿದ್ಯುತ್ ಉಪ ಕೇಂದ್ರದಲ್ಲಿ ತುರ್ತಾಗಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಗೆಯವರೆಗೆ 66/11 ಕೆ.ವಿ ಯರಗುಂಟೆ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಹೌದು, 66/11 ಕೆ.ವಿ ಯರಗುಂಟೆ ವ್ಯಾಪ್ತಿಯಲ್ಲಿ ದೇವರಾಜ್ ಅರಸ್ ಬಡಾವಣೆ ಎ, ಬಿ ಮತ್ತು ಸಿ ಬ್ಲಾಕ್, ಕರೂರು ಇಂಡಸ್ಟ್ರಿಯಲ್ ಏರಿಯಾ, ಡಿ.ಸಿ ಕಚೇರಿ, ಜಿ.ಎಂ.ಐಟಿ ಶಂಕರ್ ವಿಹಾರ ಬಡಾವಣೆ, ಶಾಂತಿನಗರ, ರಶ್ಮೀ, ಹರಿಹರ ರಸ್ತೆ, ವಿಜಯನಗರ, ಅಶೋಕನಗರ, ಆರ್.ಟಿ.ಒ ಕಚೇರಿ, ಎಸ್.ಪಿ ಕಚೇರಿ, ರಿಂಗ್ ರಸ್ತೆ, ಶಿಬಾರ, ಎಸ್.ಎಂ.ಕೆ ನಗರ ಹಾಗೂ ಚಿತ್ರನಹಳ್ಳಿ, ಕಕ್ಕರಗೊಳ್ಳ, ಆವರಗೊಳ್ಳ, ನೀಲನಹಳ್ಳಿ, ದೇವರಹಟ್ಟಿ, ದೊಡ್ಡಬಾತಿ, ಹಳೇಬಾತಿ, ನಾರಾಯಣ ಕ್ಯಾಂಪ್, ಯರಗುಂಟಾ, ಕೋಡಿಹಳ್ಳಿ ಗ್ರಾಮಗಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.