ದಾವಣಗೆರೆ ಜ.25 : ದಾವಣಗೆರೆ ನಗರ ಉಪವಿಭಾಗ-2 ರ ವ್ಯಾಪ್ತಿಯ 66/11ಕೆವಿ ದಾವಣಗೆರೆ/ಅವರಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್18-ದುರ್ಗಾಂಬಿಕಾ ಮತ್ತು ಎಫ್13-ಆನೆಕೊಂಡ ಮಾರ್ಗಗಳ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಾಗೂ ಸ್ಮಾರ್ಟ್‍ಸಿಟಿ ಕಾಮಗಾರಿಯನ್ನು ನಿರ್ವಹಿಸಬೇಕಾಗಿರುವುದರಿಂದ ಜ.27 ರ ಗುರುವಾರದಂದು ಬೆಳಿಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಎಫ್18-ದುರ್ಗಾಂಬಿಕಾ ಫೀಡರ್: ಎಮ್‍ಬಿ ಕೇರಿ, ಹೊಂಡದ ಸರ್ಕಲ್ ಸುತ್ತಮುತ್ತ, ಕಾಯಿಪೇಟೆ, ಜಾಲಿನಗರ, ಟೀಚರ್ ಕಾಲೋನಿ, ಶಿವಾಜಿ ನಗರ, ಶಿವಾಜಿ ಸರ್ಕಲ್, ಚಲುವಾದಿ ಕೇರಿ, ಇಡಬ್ಲ್ಯೂಎಸ್ ಕಾಲೋನಿ, ಹಳೇಪೇಟೆ, ಬಾರ್‍ಲೈನ್ ರಸ್ತೆ, ಹಾಗೂ ಇತರೆ ಪ್ರದೇಶಗಳು.
ಎಫ್13-ಆನೆಕೊಂಡ ಫೀಡರ್ : ಶೇಖರಪ್ಪ ನಗರ ಮಸೀದಿ ಹಿಂಭಾಗ, ರಂಭಾಪುರಿ ರಸ್ತೆ, ಮಹಾವೀರ ಭವನ, ಆರ್‍ಎಮ್‍ಸಿ ಲಿಂಕ್ ರಸ್ತೆ, ಗುಜರಿ ಲೈನ್, ಬಂಬೂಬಜಾರ್, ಬಿ.ಟಿ ಲೇಔಟ್, ಎಲ್‍ಬಿಎಸ್ ನಗರ, ಆನೆಕೊಂಡ, ಇಮಾಂನಗರ, ಬಿಡಿಓ ಆಫೀಸ್ ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.




