ತುಮಕೂರು: ಬಸ್ ಪ್ರಯಾಣಿಕರ ಸೋಗಿನಲ್ಲಿ ಪಿಕ್ ಪಾಕೇಟ್ ಮಾಡುತ್ತಿದ್ದ ಐನಾತಿ ಕಳ್ಳಿಯನ್ನು ಬಂಧಿಸಲಾಗಿದೆ. ಸುಮಾರು 10,5 ಲಕ್ಷ ಬೆಲೆ ಬಾಳುವ 134 ಗ್ರಾಂ ಚಿನ್ನದ ಒಡವೆ ವಶಕ್ಕೆ ಪಡೆಯಲಾಗಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪೊಲೀಸರು ಕಾರ್ಯಾಚರಣೆ ನಡೆಸಿ ಕೊರಟಗೆರೆ ಬೋವಿ ಕಾಲೋನಿ ನಿವಾಸಿ ಅಲುವೇಲಮ್ಮ(25) ಎಂಬುವವಳನ್ನು ಬಂಧಿಸಿದ್ದಾರೆ.
ಕಳೆದ ಜನವರಿ 9 ರಂದು ತಿಪಟೂರು ತಾಲೂಕಿನ ಗೌಡನಹಟ್ಟಿ ಗ್ರಾಮದ ರಾಜೇಶ್ವರಿ ಎಂಬುವವರು ಸಂಬಂಧಿಕರ ಮನೆಗ ಬಸ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಅಲುವೇಲಮ್ಮ ಹುಳಿಯಾರಿನ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಒಡವೆ ಕದ್ದಿದ್ದಳು. ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಲುವೇಲಮ್ಮ ಒಡವೆ ಕಳ್ಳತನ ಮಾಡಿದ್ದಳು ಎನ್ನಲಾಗಿದೆ. ಸದ್ಯ ಒಡವೆ ಕಳ್ಳಿ ಪೊಲೀಸರ ಅತಿಥಿಯಾಗಿದ್ದಾಳೆ.