ಬಳ್ಳಾರಿ/ವಿಜಯನಗರ: ವಿಜಯನಗರ ಜಿಲ್ಲೆಯ ಯೋಗಥಾನ್-2022 ಕಾರ್ಯಕ್ರಮದ ಪ್ರಯುಕ್ತ, ದೈಹಿಕ ಶಿಕ್ಷಕರು ಹಾಗೂ ಇನ್ನೀತರ ಯೋಗ ತರಬೇತುದಾರರು ಯೋಗ ಸರ್ಟೀಫೈಡ್ ಬೋರ್ಡ್ ಮೂಲಕ ಆನ್‍ಲೈನ್ ತರಬೇತಿಗಾಗಿ ನೊಂದಾಯಿಸಿಕೊಳ್ಳಬಹುದು ಎಂದು ಎಂದು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಜಿಲ್ಲಾ ಆಯುಷ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಯೋಗ ಸ್ವಯಂಸೇವಕರು ಪ್ರಮಾಣ ಪತ್ರವನ್ನು ಪಡೆಯಲು www.yogathan2022.com ವೆಬ್‍ಸೈಟ್‍ನಲ್ಲಿ ನೊಂದಾಯಿಸಿಕೊಳ್ಳಬಹುದು ಹಾಗೂ ಪ್ರತಿ 100 ಸ್ವಯಂಸೇವಕರಿಗೆ ತರಬೇತಿ ನೀಡಿದವರಿಗೆ ರೂ.10ಸಾವಿರಗಳ ಪ್ರೋತ್ಸಾಹಧನವನ್ನು ಪಡೆಯಲು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.