ದಾವಣಗೆರೆ ಆ.10: ಜಂತುಹುಳುಗಳು ಮಕ್ಕಳ ಆರೋಗ್ಯವನ್ನು ಬಹಳವಾಗಿ ಹಾಳು ಮಾಡುತ್ತವೆ. ಇದರಿಂದಾಗಿ ಮಕ್ಕಳು ಓದಿನಲ್ಲಿ ಏಕಾಗ್ರತೆ ರಕ್ತಹೀನತೆ, ನೆನಪಿನ ಶಕ್ತಿ, ಶಾಲೆಯಲ್ಲಿ ಕಲಿಕೆಯ ಸಾವ್ಮಥ್ರ್ಯಗಳನ್ನು ಕುಗ್ಗಿಸುತ್ತವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ನಾಗರಾಜ್ ತಿಳಿಸಿದರು.
ನಗರದ ಎಸ್.ಓ.ಜಿ ಕಾಲೋನಿಯ ಎ ಬ್ಲಾಕ್ ನ ಸರ್ಕಾರಿ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ “ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಂತುಹುಳುಗಳು ಮಕ್ಕಳ ದೇಹದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಆದ್ದರಿಂದ ಜಂತುಹುಳು ನಿವಾರಣಾ (ಅಲಬೆಂಡೊಜೋಲ್) ಮಾತ್ರೆಯನ್ನು ಮಕ್ಕಳು ಸೇವಿಸುವುದರಿಂದ ಆರೋಗ್ಯ, ವಿದ್ಯಾಭ್ಯಾಸ ಫಲಿತಾಂಶದಲ್ಲಿ ಏರುಮುಖದ ಬೆಳವಣಿಗೆಯನ್ನು ನೀಡುತ್ತದೆ. 01 ರಿಂದ 19 ವರ್ಷದ ಎಲ್ಲಾ ಮಕ್ಕಳಿಗೆ ಸರ್ಕಾರಿ ಮತ್ತು ಅನುದಾನಿತ ಎಲ್ಲಾ ಅಂಗನವಾಡಿ/ಶಾಲಾ/ಕಾಲೇಜುಗಳಲ್ಲಿ ಉಚಿತವಾಗಿ ನೀಡಲಾಗುವುದು ಎಲ್ಲಾರು ಇದರ ಪ್ರಯೋಜನ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ|| ಮೀನಾಕ್ಷಿ.ಕೆ.ಎಸ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ|| ಮುರುಳೀಧರ.ಪಿ.ಡಿ, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ|| ನಟರಾಜ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ|| ರೇಣುಕಾರಾಧ್ಯ.ಎಂ, ತಾಲ್ಲೂಕು ಆರೋಗ್ಯಾಧಿಕಾರಿ ಡಾ|| ದೇವರಾಜ್.ಪಿ, ಎಸ್.ಓ.ಜಿ ಕಾಲೋನಿಯ ಎ ಬ್ಲಾಕ್ ನ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಶಂಕ್ರಪ್ಪ ಸೇರಿದಂತೆ ನಗರ ಆರೋಗ್ಯ ಕೇಂದ್ರ-3ರ ಎಲ್ಲಾ ಆರೋಗ್ಯ ಸಿಬ್ಬಂದಿಗಳು. ಎಲ್ಲಾ ಜಿಲ್ಲಾ ಮಟ್ಟದ ಕಾರ್ಯಕ್ರಮ ಅನುಷ್ಠಾಧಿಕಾರಿಗಳು ಮತ್ತು ಎಲ್ಲಾ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿ/ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.