ದಾವಣಗೆರೆ: ಸೆಪ್ಟಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣ; ಟಿ.ವಿ ಸ್ಟೇಷನ್ ಕೆರೆ ಕಾಮಗಾರಿ ಪರಿಶೀಲಿಸಿದ ಸಂಸದ ಡಾ.ಜಿ.ಎಂ ಸಿದ್ದೇಶ್ವರ್

ದಾವಣಗೆರೆ: ನಗರದ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಆಸರೆಯಾಗಿರುವ ಟಿ.ವಿ. ಸ್ಟೇಶನ್ ಕೆರೆಯ ಕಾಮಗಾರಿಯನ್ನು ಸಂಸದರಾದ ಡಾ.ಜಿ.ಎಂ ಸಿದ್ದೇಶ್ವರ ಇವರು ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಪರಿಶೀಲಿಸಿದರು. ಕಾಮಗಾರಿ ಪರಿಶಿಲನೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಈ…

Dr. GM Siddeshwar vijayaprabha news

ದಾವಣಗೆರೆ: ನಗರದ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಆಸರೆಯಾಗಿರುವ ಟಿ.ವಿ. ಸ್ಟೇಶನ್ ಕೆರೆಯ ಕಾಮಗಾರಿಯನ್ನು ಸಂಸದರಾದ ಡಾ.ಜಿ.ಎಂ ಸಿದ್ದೇಶ್ವರ ಇವರು ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಪರಿಶೀಲಿಸಿದರು.

ಕಾಮಗಾರಿ ಪರಿಶಿಲನೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಈ ಕೆರೆಯನ್ನು ಬಹಳ ವರ್ಷಗಳಿಂದ ಸ್ವಚ್ಚಮಾಡಲಾಗಿಲ್ಲ, ಹಾಗಾಗಿ ಕೆರೆಯ ಪುನಶ್ಚೇತನ ಹಾಗೂ ಶುದ್ದೀಕರಣಕ್ಕಾಗಿ ಸರ್ಕಾರ 2.75 ಕೋಟಿ ಹಣ ಮಂಜೂರು ಮಾಡಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕಾಮಗಾರಿಗಳು ಆರಂಭವಾಗುವುದು ಸ್ವಲ್ಪ ತಡವಾಗಿದೆ ಹಾಗಾಗಿ ಕಾಮಗಾರಿಗಳು ಬೇಗನೆ ಮುಗಿದು ಈ ಕೆರೆಯು ನಗರಕ್ಕೆ ಕಳಶ ಪ್ರಾಯವಾಗಬೇಕೆಂದರು.

ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರು ಹಾಗೂ ಅಧಿಕಾರಿಗಳು ಸೆಪ್ಟಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ. ಸೆಪ್ಟಂಬರ್ ಒಳಗೆ ಕಾಮಗಾರಿಗಳು ಮುಗಿದರೆ ನವೆಂಬರ್‍ನಲ್ಲಿ ನಾಲೆಯಿಂದ ಕೆರೆಗೆ ನೀರು ತುಂಬಿಸಬಹುದು. ಆನಂತರ ಕೆರೆಯ ಉಳಿದ ಸೌಂದರೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ ಎಂದರು.

Vijayaprabha Mobile App free

ಕೆರೆಯ ಹೊರಾಂಗಣವನ್ನು ಸೌಂದರೀಕರಣಗೊಳಿಸಲು ಆಕರ್ಷಕ ಹೂ ಗಿಡ ಮರಗಳನ್ನು ಬೆಳೆಸುವುದು,ಆಕರ್ಷಕ ಫುಟ್‍ಪಾತ್, ವಾಕಿಂಗ್ ಪಾಥ್, ಎಲೆಕ್ಟ್ರಾನಿಕ್ ಲೈಟ್ಸ್, ಬೆಂಚ್‍ಕಲ್ಲು ಹಾಗೂ ವಾಯು ವಿಹಾರಕ್ಕೆ ಪೂರಕವಾಗುವಂತಹ ಇನ್ನಿತರೆ ಮೂಲಸೌಕರ್ಯ ಕಲ್ಪಿಸಲಾಗುವುದು. ಜಿಲ್ಲೆಯಲ್ಲಿ ಟಿವಿ ಸ್ಟೇಷನ್ ಕೆರೆ ಕೂಡ ಒಳ್ಳೆಯ ಪ್ರವಾಸಿ ಸ್ಥಳ ವಾಗಲಿದೆ ಇದಕ್ಕೆ ಜಿಲ್ಲೆಯ ಎಲ್ಲಾ ಶಾಸಕರು, ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆಯವರು, ದೂಡಾ ಅಧಿಕಾರಿಗಳು ಹೆಚ್ಚಿನ ಒತ್ತನ್ನು ನೀಡಬೇಕು ಎಂದರು.

ಇದೇ ವೇಳೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಮಹಾನಗರ ಪಾಲಿಕೆಯ ಮೇಯರ್ ಜಯಮ್ಮ ಗೋಪಿನಾಯ್ಕ್, ದೂಡಾ ಅಧ್ಯಕ್ಷ ಕೆ.ಎಂ ಸುರೇಶ್, ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷ ಬಸವರಾಜ ನಾಯ್ಕ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ದೂಡಾ ಆಯುಕ್ತ ಕುಮಾರಸ್ವಾಮಿ, ಸೇರಿದಂತೆ ಇತರರು ಹಾಜರಿದ್ದರು

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.