ಕೋಲಾರ: ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಖಾಸಗಿ ಬಸ್ ಚಾಲಕನೋರ್ವ ಬಸ್ಸನ್ನು ರಸ್ತೆಯ ಡಿವೈಡರ್‌ಗೆ ಗುದ್ದಿದ ಘಟನೆ ಕೋಲಾರದ ಬಂಗಾರಪೇಟೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಖಾಸಗಿ ಬಸ್ಸು ಬಂಗಾರಪೇಟೆಯಿಂದ ನರಸಾಪುರ ಕೈಗಾರಿಕಾ ವಲಯದತ್ತ ತೆರಳುತ್ತಿದ್ದು, ಈ ವೇಳೆ ಮಾರ್ಗಮದ್ಯೆ ದ್ವಿಚಕ್ರ ವಾಹನ ಸವಾರನೋರ್ವ ಪ್ರಜ್ಞೆ ತಪ್ಪಿ ರಸ್ತೆ ಮದ್ಯೆಯೇ ಬೈಕ್ ಅಪಘಾತಪಡಿಸಿಕೊಂಡಿದ್ದ. ಈ ವೇಳೆ ಏಕಾಏಕಿಯಾಗಿ ಬಸ್ಸಿಗೆ ಬೈಕ್ ಎದುರಾಗಿದ್ದು ಚಾಲಕ ಬೈಕ್ ಸವಾರನ ಪ್ರಾಣ ಉಳಿಸಲು ರಸ್ತೆ ಮಧ್ಯದ ಡಿವೈಡರ್ ಮೇಲೆ ಹತ್ತಿಸಿದ್ದಾನೆ.
ಬಸ್ ಚಾಲಕನ ಸಮಯಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದ್ದು ಬೈಕ್ ಚಾಲಕ ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾನೆ. ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದ ಬೈಕ್ ಚಾಲಕನಿಗೆ ಸ್ಥಳೀಯರು ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಂಗಾರಪೇಟೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.