ದಾವಣಗೆರೆ ಜ.25 :ಹರಿಹರ ನಗರದ ವ್ಯಾಪ್ತಿಯಲ್ಲಿ ವಾಜಪೇಯಿ ನಗರ ವಸತಿ ಯೋಜನೆಯಡಿ 2021-22 ನೇ ಸಾಲಿಗೆ ರಾಜೀವ್‍ಗಾಂಧಿ ವಸತಿ ನಿಗಮವು ಸಾಮಾನ್ಯ ವರ್ಗದವರಿಗೆ 66 ಹಾಗೂ ಅಲ್ಪಸಂಖ್ಯಾತ ವರ್ಗದವರಿಗೆ 10 ಸೇರಿದಂತೆ ಒಟ್ಟು 76 ಮನೆಗಳ ಗುರಿಯನ್ನು ನಿಗದಿಪಡಿಸಿದ್ದು. ಆಸಕ್ತಿವುಳ್ಳ ಅರ್ಹ ಫಲಾನುಭವಿಗಳು ಜ.31 ರ ಒಳಗೆ ಸೂಕ್ತ ದಾಖಲಾತಿಗಳೊಂದಿಗೆ ನಿಗದಿಪಡಿಸಿದ ನಮೂನೆಯಲ್ಲಿ ನಗರಸಭೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳು: ಖಾಲಿ ನಿವೇಶನ ಹೊಂದಿರಬೇಕು, ಕುಟುಂದ ವಾರ್ಷಿಕ ಆದಾಯ 87600/- ಮೀರಿರಬಾರದು, ಗುಡಿಸಲು ವಾಸಿಗಳು, ತಾತ್ಕಾಲಿಕ ಶೇಡ್, ಶಿಥಿಲಗೊಂಡ ಮನೆ, ಕಚ್ಚಾ ಮನೆಗಳಲ್ಲಿ ವಾಸಿಸುತ್ತಿರುವವರು, ಒಂದು ಕೊಣೆಯಿಲ್ಲದ 4ಕ್ಕಿಂತ ಹೆಚ್ಚು ಸದಸ್ಯರುಳ್ಳ ಕುಟುಂಬದವರು ಮಾತ್ರ ಅರ್ಹರು.
ಹೆಚ್ಚಿನ ಮಾಹಿತಿಗಾಗಿ ಕಛೇರಿಯ ಸಮಯದಲ್ಲಿ ಆಶ್ರಯ ಶಾಖೆಯ ವಿಷಯ ನಿರ್ವಾಹಕರನ್ನು ಸಂಪರ್ಕಿಸಬಹುದು ಎಂದು ಪೌರಾಯುಕ್ತರು ನಗರಸಭೆ ಹರಿಹರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.