ಹೊಸಪೇಟೆ(ವಿಜಯನಗರ)ಆ.05: ವಿಜಯನಗರ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ನಿಧಿಯಡಿ ವಿಜಯನಗರ ಜಿಲ್ಲೆಯಲ್ಲಿನ ಬಡತನ ರೇಖೆಗಿಂತ ಕೆಳಗಿರುವ ಪದವಿ ಪೂರ್ವ (ಪಿ.ಯು.ಸಿ ದ್ವಿತೀಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ) ವಿದ್ಯಾರ್ಥಿಗಳಿಗೆ ಸೂಪರ್-100 ಯೋಜನೆಯಡಿಯಲ್ಲಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕೋರ್ಸ್‍ಗಳಿಗಾಗಿ ತರಬೇತಿ ನೀಡಲು ಅರ್ಹ ಶಿಕ್ಷಣ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ವಿಜಯನಗರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‍ನ ಅಧ್ಯಕ್ಷರಾದ ಅನಿರುದ್ಧ್ ಶ್ರವಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತ ಶಿಕ್ಷಣ ಸಂಸ್ಥೆಗಳು ಅರ್ಜಿಯನ್ನು ಆ.10ರಿಂದ ಆ.16ರೊಳಗಾಗಿ ಇ-ಮೇಲ್ ವಿಳಾಸ “Super100.vjnr@gmail.com” ಗೆ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.
ತರಬೇತಿಯ ಅರ್ಜಿ ನಮೂನೆ, ಅರ್ಹತೆ, ಆಯ್ಕೆ ಮಾನದಂಡಗಳು ಹಾಗೂ ಹೆಚ್ಚಿನ ಮಾಹಿತಿಯನ್ನು ವೆಬ್‍ಸೈಟ್ https://vijayanagara.nic.in/ ನಲ್ಲಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.