ದಾವಣಗೆರೆ ಜೂ.06: ದೇಶದ ಆರ್ಥಿಕ ವ್ಯವಹಾರಗಳನ್ನು ಗಣನೀಯವಾಗಿ ಹೆಚ್ಚಿಸಲು ಮತ್ತು ಗ್ರಾಹಕರಿಗೆ ಆರ್ಥಿಕ ಉತ್ತೇಜನವನ್ನು ನೀಡುವ ಉದ್ದೇಶದಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ, ಕೇಂದ್ರ ಹಣಕಾಸು ಸೇವೆಗಳ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿಯ ನಿರ್ದೇಶನದ ಮೇರೆಗೆ “ಸಾಲ ಸಂಪರ್ಕ ಕಾರ್ಯಕ್ರಮ” ವನ್ನು ಜೂನ್ 08ರಂದು ಬೆಳಿಗ್ಗೆ 10.30 ಕ್ಕೆ ದಾವಣಗೆರೆ ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಉದ್ಘಾಟಿಸುವರು. ಕೆನರಾ ಬ್ಯಾಂಕ್‍ನ ಸಹಾಯಕ ಮಹಾ ಪ್ರಬಂಧಕರಾದ ವೈ.ವಿ.ಎನ್ ಶಿವಪ್ರಸಾದ್ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಾಯಕ ಮಹಾಪ್ರಬಂಧಕರಾದ ಅನಿಲ್ ಬಿಹಾರಿ, ಕರ್ನಾಟಕ ಗ್ರಾಮೀಣಾ ಬ್ಯಾಂಕ್‍ನ ಸಹಾಯಕ ಮಹಾಪ್ರಬಂಧಕರದ ನಾಗೇಶ್ ಪ್ರಭು, ಡಿ.ಡಿ.ಎಂ ನಬಾರ್ಡ್ ವಿ.ರವೀಂದ್ರ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಉಪ ಮಹಾಪ್ರಬಂಧಕರಾದ ಎ.ರಾಜಾಮಣಿ, ಬ್ಯಾಂಕ್ ಬರೋಡಾ ಉಪಮಹಾಪ್ರಬಂಧಕರಾದ ಆರ್.ವಿ.ಎಸ್.ವಿ ಶ್ರೀಧರ್, ಡಿ.ಸಿ.ಸಿ ಬ್ಯಾಂಕ್ ಲಿ ತಾವರ್ಯಾ ನಾಯ್ಕ್ ಪಾಲ್ಗೋಳ್ಳುವರೆಂದು ತಿಳಿಸಿದೆ.