ದಾವಣಗೆರೆ: ಜಿಲ್ಲಾ ಆಸ್ಪತ್ರೆಯಲ್ಲಿ ವಿವಿಧ ವೈದ್ಯಕೀಯ ಉಪಕರಣಗಳ ಉದ್ಘಾಟನೆ

ದಾವಣಗೆರೆ ಫೆ.16 :ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಾರ್ಗಿಲ್ ಮಲ್ಟಿನ್ಯಾಷನಲ್ ಕಂಪನಿ ವತಿಯಿಂದ ಸಿಎಸ್‍ಆರ್ ನಿಧಿಯಡಿ ನೀಡಲಾದ ವಿವಿಧ ವೈದ್ಯಕೀಯ ಉಪಕರಣಗಳನ್ನು ಸಂಸದರಾದ ಡಾ. ಜಿ.ಎಂ ಸಿದ್ದೇಶ್ವರ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ…

medical equipment at District Hospital vijayaprabha news

ದಾವಣಗೆರೆ ಫೆ.16 :ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಾರ್ಗಿಲ್ ಮಲ್ಟಿನ್ಯಾಷನಲ್ ಕಂಪನಿ ವತಿಯಿಂದ ಸಿಎಸ್‍ಆರ್ ನಿಧಿಯಡಿ ನೀಡಲಾದ ವಿವಿಧ ವೈದ್ಯಕೀಯ ಉಪಕರಣಗಳನ್ನು ಸಂಸದರಾದ ಡಾ. ಜಿ.ಎಂ ಸಿದ್ದೇಶ್ವರ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಬುಧವಾರದಂದು ಉದ್ಘಾಟಿಸಿದರು.

ಜಿಲ್ಲಾ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಸುಮಾರು 90 ಲಕ್ಷ ರೂ. ಮೊತ್ತದಲ್ಲಿ ಕಾರ್ಗಿಲ್ ಮಲ್ಟಿನ್ಯಾಷನಲ್ ಕಂಪನಿ ವತಿಯಿಂದ ಸಿಎಸ್‍ಆರ್ ನಿಧಿಯಡಿ ನೀಡಲಾದ ಫುಲ್ ಆಟೋಮೆಟಿಕ್ ಇಮಿನೊ ಡಯಾಗ್ನಸ್ಟಿಕ್ಸ್ ಸಿಸ್ಟಂ, ಆಟೋಮೆಟೆಡ್ ಬಯೋ ಕೆಮಿಸ್ಟ್ರಿ ಅನಲೈಸರ್, ಅನಸ್ತೇಷಿಯಾ ಯಂತ್ರ, ಇಸಿಜಿ ಯಂತ್ರ ವೈದ್ಯಕೀಯ ಉಪಕರಣಗಳನ್ನು ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.

ಇದೇ ಸಂದರ್ಭದಲ್ಲಿ ಧೂಡ ಅಧ್ಯಕ್ಷ ದೇವರಮನೆ ಶಿವಕುಮಾರ್, ಮಾಜಿ ಶಾಸಕ ಬಿ.ಪಿ ಹರೀಶ್, ಡಾ. ಕುಮಾರ್, ಡಾ. ಮಂಜುನಾಥ, ಡಾ. ನಂದಕುಮಾರ, ಕಾರ್ಗಿಲ್ ಮಲ್ಟಿನ್ಯಾಷನಲ್ ಕಂಪನಿಯ ಉದೇಶ್, ಗೋಕುಲ್, ಕವನ್ ಕಾವೇರಪ್ಪ, ಪ್ರವೀಣ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.