ವಿಜಯನಗರ: ಅಕ್ರಮ ಅಕ್ಕಿ ಸಾಗಾಟ ಪ್ರಕರಣದಲ್ಲಿ ಚಿತ್ರದುರ್ಗ ಕಡೆ ಅನುಮಾನಸ್ಪದವಾಗಿ ಹೋಗುತ್ತಿದ್ದ ವಾಹನವನ್ನು ಪರಿಶೀಲಿಸಿ ಇಬ್ಬರನ್ನು ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಪೊಲೀಸರು ಬಂಧಿಸಿದ್ದು, ಚಾಲಕ ಧರ್ಮರಾಜ್, ಗಣೇಶ ಬಂಧಿತ ಆರೋಪಿಗಳಾಗಿದ್ದಾರೆ.
ಹೌದು, ಚಿತ್ರದುರ್ಗ ಕಡೆ ಅನುಮಾನಸ್ಪದವಾಗಿ ಹೋಗುತ್ತಿದ್ದ ವಾಹನವನ್ನು ಗಸ್ತಿನಲ್ಲಿದ್ದ ಕೂಡ್ಲಿಗಿ ಪೊಲೀಸ್ ಅಧಿಕಾರಿಗಳು ಪರಿಶೀಲನೆ ಮಾಡಿದಾಗ ಅದರಲ್ಲಿ 66,828 ರೂ ಮೌಲ್ಯದ 2,335 ಕೆ.ಜಿ. ಅಕ್ಕಿ ಇರುವುದು ಪತ್ತೆಯಾಗಿದೆ.
ಇನ್ನು, ಕೂಡ್ಲಿಗಿ ಆಹಾರ ನಿರೀಕ್ಷಕರನ್ನು ಕರೆಸಿ ಪರಿಶೀಲಿಸಿದಾಗ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬುದು ಗೊತ್ತಾಗಿದ್ದು, ವಾಹನವನ್ನು ಜಪ್ತಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.