Honnavar Accident: ಕುಡಿದ ಮತ್ತಿನಲ್ಲಿ ಡಿವೈಡರ್‌ಗೆ ಗುದ್ದಿದ ಮಿನಿಗೂಡ್ಸ್ ಚಾಲಕ

ಹೊನ್ನಾವರ: ಕುಡಿದ ಮತ್ತಿನಲ್ಲಿ ಮಿನಿ ಗೂಡ್ಸ್ ವಾಹನ ಚಲಾಯಿಸಿದ ಪರಿಣಾಮ ಹೆದ್ದಾರಿಯ ಡಿವೈಡರ್‌ಗೆ ಡಿಕ್ಕಿ ಹೊಡೆದುಕೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕರ್ಕಿ ಸರ್ಕಾರಿ ಶಾಲೆ ಎದುರು ಸಂಭವಿಸಿದೆ. ಅಪಘಾತದಲ್ಲಿ ಅದೃಷ್ಟವಶಾತ್ ಚಾಲಕ ಹಾಗೂ…

ಹೊನ್ನಾವರ: ಕುಡಿದ ಮತ್ತಿನಲ್ಲಿ ಮಿನಿ ಗೂಡ್ಸ್ ವಾಹನ ಚಲಾಯಿಸಿದ ಪರಿಣಾಮ ಹೆದ್ದಾರಿಯ ಡಿವೈಡರ್‌ಗೆ ಡಿಕ್ಕಿ ಹೊಡೆದುಕೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕರ್ಕಿ ಸರ್ಕಾರಿ ಶಾಲೆ ಎದುರು ಸಂಭವಿಸಿದೆ. ಅಪಘಾತದಲ್ಲಿ ಅದೃಷ್ಟವಶಾತ್ ಚಾಲಕ ಹಾಗೂ ಮೂವರು ಸಹ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೊನ್ನಾವರದ ರೋನಿ ಎಂಬುವವರಿಗೆ ಸೇರಿದ ಮಿನಿಗೂಡ್ಸ್ ವಾಹನವನ್ನು ಡೆಕೋರೇಟರ್ ಸಾಮಾನುಗಳನ್ನು ಸಾಗಿಸಲು ಕಾರವಾರಕ್ಕೆ ಕೊಂಡೊಯ್ಯಲಾಗಿತ್ತು. ಸಾಮಾನುಗಳನ್ನು ಖಾಲಿ ಮಾಡಿ ಹೊನ್ನಾವರಕ್ಕೆ ವಾಪಸ್ಸಾಗುತ್ತಿದ್ದ ವೇಳೆ ತಡರಾತ್ರಿ ಈ ಅಪಘಾತ ಸಂಭವಿಸಿದೆ. 

ಡಿಕ್ಕಿ ರಭಸಕ್ಕೆ ಮಿನಿಗೂಡ್ಸ್‌ ವಾಹನದ ಎರಡು ಟಯರ್‌ಗಳು ಬ್ಲ್ಯಾಸ್ಟ್ ಆಗಿದ್ದು, ಡಿವೈಡರ್ ಮೇಲೆ ಹತ್ತಿ ಬೀದಿದೀಪಕ್ಕೆ ಡಿಕ್ಕಿಯಾಗಿ ಲೈಟಿನ ಕಂಬದಿಂದ ವಿದ್ಯುತ್‌ದೀಪ ಕಳಚಿ ಬಿದ್ದಿದೆ. ವಾಹನದ ಸ್ಟೆಪ್ನಿ ವೀಲ್ ಮಾರು ದೂರ ಹೋಗಿ ಬಿದ್ದಿದ್ದು, ಗಾಡಿಯಲ್ಲಿದ್ದ ಸಣ್ಣ ಅಡುಗೆ ಸಿಲಿಂಡರ್ ಸಹ ಸಾಕಷ್ಟು ದೂರ ಹೋಗಿ ರಸ್ತೆಯಲ್ಲಿ ಬಿದ್ದಿದೆ. ವಾಹನದ ಚಾಲಕ ಹಾಗೂ ಜೊತೆಗಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಹೊನ್ನಾವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.