ಹೊಸಪೇಟೆಯ ಉಪ ಕಾರಾಗೃಹದಲ್ಲಿ ಆರೋಗ್ಯ ತಪಾಸಣೆ ಮತ್ತು ಸಾಂಕೃತಿಕ ಕಾರ್ಯಕ್ರಮಗಳು

ಹೊಸಪೇಟೆ(ವಿಜಯನಗರ),ಆ.16: ವಿಜಯನಗರ ಜಿಲ್ಲೆಯ ಹೊಸಪೇಟೆಯ ಉಪ ಕಾರಾಗೃಹದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಬಂಧಿಗಳಿಗೆ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದಿಂದ ಮಾನಸಿಕ ಆರೊಗ್ಯ ತಪಾಸಣೆ ಇತ್ತೀಚೆಗೆ ನಡೆಯಿತು.…

Health Checkup and Cultural Program at Hospet Sub Jail

ಹೊಸಪೇಟೆ(ವಿಜಯನಗರ),ಆ.16: ವಿಜಯನಗರ ಜಿಲ್ಲೆಯ ಹೊಸಪೇಟೆಯ ಉಪ ಕಾರಾಗೃಹದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಬಂಧಿಗಳಿಗೆ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದಿಂದ ಮಾನಸಿಕ ಆರೊಗ್ಯ ತಪಾಸಣೆ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮದಲ್ಲಿ ಉಪ ಕಾರಾಗೃಹದ ಅಧೀಕ್ಷಕರಾದ ಎಂ.ಹೆಚ್.ಕಲಾದಗಿ, 100 ಬೆಡ್ ಆಸ್ಪತ್ರೆಯ ವೈದ್ಯರಾದ ಡಾ.ಸೋಮಶೇಖರ್, ಡಾ.ಹರಿಪ್ರಸಾದ್ ಹಾಗೂ ಕೌನ್ಸರ್‍ಗಳಾದ ಮಾರೇಶ್.ಜಿ ಮತ್ತು ಸಹದೇವ್ ಸೇರಿದಂತೆ ಕಾರಾಗೃಹದ ಸಿಬ್ಬಂದಿಗಳು ಇದ್ದರು.

*ಅಂಬೆ ಪ್ರಕಾಶನ ವತಿಯಿಂದ ಸಾಂಸ್ಕøತಿಕ ಕಾರ್ಯಕ್ರಮಗಳು: 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಜಾದಿ ಕಾ ಅಮೃತ್ ಮಹೊತ್ಸವ ನಿಮಿತ್ತ ಅಂಬೆ ಪ್ರಕಾಶನ ವತಿಯಿಂದ ಕಾರಾಗೃಹದ ಬಂಧಿಗಳಿಗೆ ದೇಶ ಭಕ್ತಿಗೀತೆ ಹಾಗೂ ಸಾಂಕೃತಿಕ ಕಾರ್ಯಕ್ರಮಗಳನ್ನು ಕಾರಾಗೃಹದಲ್ಲಿ ಇತ್ತೀಚೆಗೆ ನಡೆಸಲಾಗಿತ್ತು.

Vijayaprabha Mobile App free

ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವ ಮೂಲಕ ಪಿ.ಡಿ.ಐ.ಟಿ ಕಾಲೇಜಿನ ಪ್ರಾಂಶುಪಾಲರಾದ ಎಸ್.ಎಂ.ಶಶಿಧರ್ ಅವರು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಉಪ ಕಾರಾಗೃಹದ ಅಧೀಕ್ಷಕರಾದ ಎಂ.ಹೆಚ್.ಕಲಾದಗಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉಪನ್ಯಾಸಕರು ಹಾಗೂ ಸಂಗೀತ ವಿದ್ವಾಂಸಕರಾದ ನಾಗರಾಜ ಪತ್ತಾರ್, ಗೃಹ ರಕ್ಷಕದಳದ ಸಮಾದೇಶ ಅಧಿಕಾರಿಗಳಾದ ಎಸ್.ಎಂ.ಗಿರೀಶ್, ಖ್ಯಾತ ಲೇಖಕಿ ಹಾಗೂ ಪ್ರಕಾಶಕರಾದ ಅಂಜಲಿ ಬೆಳಗಲ್, ಸಂಗೀತಕಲಾವಿದರಾದ ಸಂತೋಷ ಹೊಸಕೋಟೆ, ನೃತ್ಯಕಲಾವಿದರಾದ ಶ್ರೀ.ರಾಮಾಲಿ ಸೇರಿದಂತೆ ಕಾರಾಗೃಹದ ಸಿಬ್ಬಂದಿಗಳು ಭಾಗವಹಿಸಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.