ಆಧುನಿಕ ಹೈನುಗಾರಿಕೆ ಉಚಿತ ತರಬೇತಿ

ದಾವಣಗೆರೆ ಸೆ.21: ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಆಧುನಿಕ ಹೈನುಗಾರಿಕೆ ಉಚಿತ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪಿ.ಬಿ. ರಸ್ತೆಯ ಅರುಣ ಚಿತ್ರ ಮಂದಿರದ ಎದುರಿನ ಪಶು ವೈದ್ಯಕೀಯ ಸಹಾಯಕ ತರಬೇತಿ…

dairy farming

ದಾವಣಗೆರೆ ಸೆ.21: ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಆಧುನಿಕ ಹೈನುಗಾರಿಕೆ ಉಚಿತ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಪಿ.ಬಿ. ರಸ್ತೆಯ ಅರುಣ ಚಿತ್ರ ಮಂದಿರದ ಎದುರಿನ ಪಶು ವೈದ್ಯಕೀಯ ಸಹಾಯಕ ತರಬೇತಿ ಕೇಂದ್ರದಲ್ಲಿ ಸೆ.23 ರಿಂದ 25 ರವರೆಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 3 ದಿನಗಳ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಈ ತರಬೇತಿ ಪಡೆಯಲು 30 ಜನರಿಗೆ ಮಾತ್ರ ಅವಕಾಶವಿದ್ದು, ತರಬೇತಿ ಅವಧಿಯಲ್ಲಿ ಊಟ, ವಸತಿ ಸೌಕರ್ಯದ ವ್ಯವಸ್ಥೆ ಇರುವುದಿಲ್ಲ. ಹಾಗೂ ಆಸಕ್ತ ರೈತರು, ಮಹಿಳೆಯರು ನಿರುದ್ಯೋಗ ಯುವಕ, ಯುವತಿಯರು ತರಬೇತಿಗೆ ಹಾಜರಾಗಲು ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಜಾತಿ ಪ್ರಮಾಣ ಪತ್ರ (ಎಸ್‍ಸಿ/ಎಸ್‍ಟಿ) ಜೆರಾಕ್ಸ್ ಪ್ರತಿ ಹಾಗೂ 2 ಪಾಸ್‍ಪೋರ್ಟ್ ಸೈಜಿನ ಫೋಟೋ ತೆಗೆದುಕೊಂಡು ಬರಬೇಕು. ಈ ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಹಾಗೂ ಭತ್ಯೆಗಳನ್ನು ನೀಡಲಾಗುವುದಿಲ್ಲ.

Vijayaprabha Mobile App free

ಹೆಚ್ಚಿನ ಮಾಹಿತಿಗಾಗಿ ಪಶುವೈದ್ಯಕೀಯ ಸಹಾಯಕ ತರಬೇತಿ ಕೇಂದ್ರ, ದಾವಣಗೆರೆ ದೂ.ಸಂ: 08192-233787 ನ್ನು ಸಂಪರ್ಕಿಸಬಹುದೆಂದು ಮುಖ್ಯ ಪಶುವೈದ್ಯಾಧಿಕಾರಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.