ದಾವಣಗೆರೆ: ಮೇ.11ರಂದು ದಾವಣಗೆರೆ ನಗರದ ದೈವಜ್ಞ ದಿವ್ಯ ಜ್ಯೋತಿ ಮಿತ್ರ ಮಂಡಳಿ ವತಿಯಿಂದ, ದೈವಜ್ಞ ಸಮಾಜ ಬಾಂಧವರಿಗೆ 23 ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮತ್ತು ಉಪನಯನ ಕಾರ್ಯಕ್ರಮಗಳನ್ನು ದೈವಜ್ಞ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಂಡಳಿಯ ಸಂಸ್ಥಾಪಕರಾದ ಹೆಚ್.ಜಿ. ಹನುಮಂತರಾವ್ ಪಾಲನಕರ್ ಅವರು ತಿಳಿಸಿದ್ದಾರೆ.
ಹೌದು, ಈ ಬಗ್ಗೆ ಮಾಹಿತಿ ನೀಡಿದ ಮಂಡಳಿಯ ಸಂಸ್ಥಾಪಕರಾದ ಹೆಚ್.ಜಿ. ಹನುಮಂತರಾವ್ ಪಾಲನಕರ್ ಅವರು, ಸಮಾಜದ ಬಡ ಕುಟುಂಬದ ವಧುವರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮಂಡಳಿ ಕಳೆದ 23 ವರ್ಷಗಳಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಕಳೆದ ವರ್ಷ 25 ವಟುಗಳು ಅವಕಾಶ ಸದುಪಯೋಗ ಪಡಿಸಿಕೊಂಡಿದ್ದು, ಈ ಬಾರಿಯೂ ಹೆಚ್ಚಿನ ಬಾಂಧವರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಇನ್ನು, ಮಂಡಳಿ ಅಧ್ಯಕ್ಷ ವಿಮಲೇಶ್ವರ್ ಜಿ. ರೇವಣಕರ್ ಅವರು ಮಾತನಾಡಿ, ಉಪನಯ ಹಾಗೂ ವಿವಾಹ ಮಾಡಿಕೊಳ್ಳಲು ಇಚ್ಛಿಸುವವರು ಮೇ.1ರೊಳಗೆ ನೋಂದಾಯಿಸಲು ಅವಕಾಶವಿದ್ದು, ಮಂಡಳಿಯ ಸಂಸ್ಥಾಪಕ ಹನುಮಂತರಾವ್ ಜಿ. ಪಾಲನಕರ್ ಮೊ: 7899881161,ವಿಶ್ವೇಶ್ವರ ಜಿ. ರೇವಣಕರ್ ಮೊ: 9448929964 ಸಂಪರ್ಕಿಸಿ ಎಂದು ತಿಳಿಸಿದ್ದಾರೆ.