ವಿಜಯನಗರ: ಹೂವಿನಹಡಗಲಿ ತಾಲೂಕು ವ್ಯಾಪ್ತಿಯಲ್ಲಿ ಈರುಳ್ಳಿ ಬೆಳೆಯಲ್ಲಿ ಹವಮಾನ ವೈಪರಿತ್ಯ ಹಾಗೂ ಸತತ ಮಳೆಯಿಂದಾಗಿ ಶಿಲೀಂಧ್ರದ ಬೆಳವಣೆಗೆಯಿಂದ ಕೊಳೆ ರೋಗ ಬಾಧೆಯು ತಾಲೂಕಿನ ವಿವಿಧ ಭಾಗಗಳಲ್ಲಿ ಕಂಡು ಬರುತ್ತಿದ್ದು, ಈರುಳ್ಳಿ ಬೆಳೆಯುವ ರೈತರು ಮುಂಜಾಗ್ರತೆ ಕ್ರಮಗಳನ್ನು, ಔಷದೋಪಚಾರವನ್ನು ಕೈಗೊಳ್ಳಬೇಕು ಎಂದು ಹೂವಿನಹಡಗಲಿ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
ಕೈಗೊಳ್ಳಬೇಕಾದ ಕ್ರಮಗಳಿವು:
ಪರ್ಯಾಯ ಬೆಳೆ ಪದ್ದತಿಯನ್ನು ಅನುಸರಿಸಬೇಕಾಗಿದ್ದು, (ಪದೇ ಪದೇ ಈರುಳ್ಳಿ ಬೆಳೆಯನ್ನು ಒಂದೇ ಹೊಲದಲ್ಲಿ ಹಲವು ಬಾರಿ ಬೆಳೆಯುತ್ತಿದ್ದರೆ ಕೊಳೆ ರೋಗ ಭಾಧೆಯು ಹೆಚ್ಚಾಗಿ ಬರುತ್ತದೆ. ಅಷ್ಟೇ ಅಲ್ಲ, ಹೊಲದಲ್ಲಿ ನೀರು ನಿಲ್ಲದಂತೆ ಹಾಗೂ ಹೆಚ್ಚಿನ ತೇವಾಂಶ ಇರದಂತೆ ಎಚ್ಚರವಹಿಸಬೇಕು(ಈರುಳ್ಳಿ ಗಡ್ಡೆಗಳು ಕೊಳೆ ರೋಗ ಭಾಧೆಗೆ ಬೇಗನೆ ಹಾಳಾಗುತ್ತವೆ) ಕಳೆಯನ್ನು ಬಾರದಂತೆ ನಿಯಂತ್ರಿಸಬೇಕು. ಇನ್ನು, ಟ್ರೈಕೋಡರ್ಮಾ 2 ಕಿ.ಗ್ರಾಂ ಪ್ರತಿ 100 ಕಿ.ಗ್ರಾಂ ಕೊಟ್ಟಿಗೆ ಗೊಬ್ಬರಕ್ಕೆ ಚೆನ್ನಾಗಿ ಬೆರಸಿ ಪ್ರತಿ ಎಕರೆ ಹೊಲದಲ್ಲಿ ಎಲ್ಲಾ ಕಡೆ ಸಮ ಪ್ರಮಾಣದಲ್ಲಿ ಹಾಕಿ, ಇದರಿಂದ ಶೀಲಿಂಧ್ರ ಬೆಳೆವಣೆಗೆಯನ್ನು ತಡೆಯುತ್ತದೆ.
Vespa (Propiconazole ಶೇ.13.9+ Difenconazole ಶೇ.13.9 EC) 1ಮೀಲಿ/1 ಲೀಟರ್ ನೀರಿಗೆ + Imidacloprid 17.8 SL 0.3 ml/1ಲೀಟರ್ ನೀರಿಗೆ Taqat (Captan ಶೇ.70+ Hexaconazole ಶೇ.5 WP) 2ಗ್ರಾಂ/1 ಲೀಟರ್ ನೀರಿಗೆ + Thiamethoxam 25 wg 0.3 gm 1 ಲೀಟರ್ ನೀರಿಗೆ, Amistar Top (Azoxystrobin ಶೇ.20+ Difenoconazole ಶೇ.12.5 SC) 1ಮೀಲಿ/1 ಲೀಟರ್ ನೀರಿಗೆ Merger (Tricyclazole ಶೇ.18 + Mancozeb ಶೇ.62 WP) 2ಗ್ರಾಂ/1 ಲೀಟರ್ ನೀರಿಗೆ Custodia (Azoxystrobin ಶೇ.11 + Tebuconazole ಶೇ.18.3 w/w SC) 1ಮೀಲಿ/1 ಲೀಟರ್ ನೀರಿಗೆ.
ಈ ಮೇಲಿನ ಔಷದಿಗಳಲ್ಲಿ ಯಾವುದಾದರು ಒಂದನ್ನು ಬಳಸಬೇಕು ನಂತರ ಮತ್ತೊಮ್ಮೆ ಪುನಾರವರ್ತಿಸದೇ 8 ದಿನಗಳ ಅವಧಿಯಲ್ಲಿ 2 ಬಾರಿ ಸಿಂಪರಣೆಯನ್ನು ಕೈಗೊಂಡು ಈರುಳ್ಳಿ ಬೆಳೆಯಲ್ಲಿ ಕೊಳೆ ರೋಗ ಬಾಧೆಯನ್ನು ನಿಯಂತ್ರಿಸಬಹುದು ಎಂದು ಗುರುವಾರದಂದು ಕೊಟ್ರಪ್ಪ ತಂದೆ ಕಲ್ಲಪ್ಪ ಗ್ರಾಮ ಹೊಳಗುಂದಿ ರವರ ತಾಕಿನಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಹನುಮಂತನಾಯ್ಕ ಟಿ, ಹಡಗಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಲು ಡಾ, ಸಿ ಎಂ ಕಾಲಿಬಾವಿ, ಹಡಗಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಕೀಟ ಶಾಸ್ತ್ರದ ಸಹಾಯಕ ಪ್ರಾಧ್ಯಪಕರಾದ ಡಾ.ಹನುಮಂತಪ್ಪ ಶ್ರೀಹರಿ, ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಚಂದ್ರಕುಮಾರ ಎನ್.ಎಲ್, ಸಹಾಯಕ ತೋಟಗಾರಿಕೆ ಅಧಿಕಾರಿ ಹರೀಶ ಎಂ.ಆರ್ ಅವರು ಬೆಳೆಯನ್ನು ಪರಿಶೀಲಿಸಿ ಸೂಕ್ತ ಔಷದೋಪಚಾರದ ಕುರಿತು ರೈತರಿಗೆ ಮುಂಜಾಗ್ರತೆ ಕೈಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.