ದಾವಣಗೆರೆ: ಶಿಸ್ತಿನಿಂದ ಇರುವ ಪ್ರತಿಯೊಬ್ಬ ವಿದ್ಯಾರ್ಥಿಯು ಸೈನಿಕನೇ: ಹವಾಲ್ದಾರ ಎಸ್ ರವಿಕುಮಾರ್

ದಾವಣಗೆರೆ ಆ.16: ದೇಶದಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಯು ಸೈನಿಕ ತನ್ನ ಸಮಾಜ, ಹಿರಿಯರು ಹಾಗೂ ತಾನಿರುವ ವಾತಾವರಣವನ್ನು ಸಂರಕ್ಷಣೆ ಮಾಡುವ ಹೊಣೆ ಹೊತ್ತು ಅದನ್ನು ಶಿಸ್ತಿನಿಂದ ನಿಭಾಯಿಸಿದರೆ ಅವರೇ ಸೈನಿಕನೆಂದು ಭಾರತೀಯ ಸೇನೆಯ ಹವಾಲ್ದಾರ ಎಸ್…

Havaldar S Ravikumar

ದಾವಣಗೆರೆ ಆ.16: ದೇಶದಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಯು ಸೈನಿಕ ತನ್ನ ಸಮಾಜ, ಹಿರಿಯರು ಹಾಗೂ ತಾನಿರುವ ವಾತಾವರಣವನ್ನು ಸಂರಕ್ಷಣೆ ಮಾಡುವ ಹೊಣೆ ಹೊತ್ತು ಅದನ್ನು ಶಿಸ್ತಿನಿಂದ ನಿಭಾಯಿಸಿದರೆ ಅವರೇ ಸೈನಿಕನೆಂದು ಭಾರತೀಯ ಸೇನೆಯ ಹವಾಲ್ದಾರ ಎಸ್ ರವಿಕುಮಾರ್ ಸಿತಿಮನಿ ರವರು ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಅಮೃತ ಮಹೋತ್ಸವದ ಆಚರಣೆಯನ್ನು ನಾವೆಲ್ಲ ತುಂಬಾ ಹೆಮ್ಮೆಯಿಂದ ಆಚರಿಸುತ್ತೇವೆ ಆದರೆ ಇದರ ಹಿಂದೆ ಸಾವಿರಾರು ಸೈನಿಕರ ಹೋರಾಟಗಾರರ ವೀರಯೋಧರ ಪರಿಶ್ರಮವಿದೆ. ಪ್ರತಿಯೊಬ್ಬರೂ ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ್ದಾರೆ. ಹಾಗೆ ಎಲ್ಲವನ್ನೂ ತ್ಯಜಿಸಿ ಸ್ವಾತಂತ್ರ್ಯವೇ ಮುಖ್ಯ ಎನ್ನುವ ರೀತಿಯಲ್ಲಿ ಹೋರಾಟ ಮಾಡಿದಾಗ ಸ್ವಾತಂತ್ರ್ಯ ನಮಗೆ ದೊರಕಿದ್ದು, ಅದನ್ನು ನಾವು ಸಂಭ್ರಮದಿಂದ ಆಚರಿಸುತ್ತೇವೆಯೋ ಹಾಗೆ ಅದನ್ನು ಉಳಿಸುವ ಪ್ರಯತ್ನ ಕೂಡ ಮಾಡಬೇಕು ಎಂದು ಹೇಳಿದರು.

ಪ್ರತಿಯೊಬ್ಬ ವಿದ್ಯಾರ್ಥಿಗಳು ತಾವು ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿ ದೇಶಕ್ಕೆ ಏನು ಕೊಡುಗೆ ನೀಡುವೆವು ಎಂದು ಯೋಚನೆ ಮಾಡಿ ಕೊಡುಗೆ ನೀಡುವ ರೀತಿಯಲ್ಲಿ ಮನಸ್ಸು ಮಾಡಿ ಸಾಧನೆ ಮಾಡಿದರೆ, ಅವರೆಲ್ಲರೂ ಸೈನಿಕರಾಗಿ ದೇಶ ಮುಂದುವರೆಯಲು ಸಾಧ್ಯ ಎಂದು ತಿಳಿಸಿದರು.

Vijayaprabha Mobile App free

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅಂಜನಪ್ಪ ಎಸ್.ಆರ್ ಮಾತನಾಡಿ, ಪ್ರತಿ ಮನೆ ಮನೆ ಮೇಲೆ ತಿರಂಗ ಹಾರಿಸುವ ಕೇಲಸ ಶ್ಲಾಘನೀಯ. ಇದಕ್ಕೆ ಪ್ರತಿಯೊಬ್ಬರ ಮನಸ್ಸಿನಲ್ಲೂ ತಿರಂಗಾ ಹಾರಿದಾಗ ಈ ಕಾರ್ಯಕ್ರಮ ನಿಜವಾಗಲು ಅರ್ಥಪೂರ್ಣವಾಗುತ್ತದೆ. ಪ್ರತಿಯೊಬ್ಬ ಪ್ರಜೆಯೂ ದೇಶದ ತ್ರಿವರ್ಣ ಧ್ವಜವನ್ನು ಹಾರಿಸುವ ಹಾಗೂ ಅದನ್ನು ಗೌರವಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ನಮಗೆ ಸಿಕ್ಕ ಸ್ವಾತಂತ್ರ್ಯ ಸ್ವೇಚ್ಛಾಚಾರವಲ್ಲ, ಅದನ್ನು ಸಮಾಜ ಸುಧಾರಣೆಗೆ ಒಳ್ಳೆಯ ಕೆಲಸಗಳಿಗೆ ಬಳಸುವ ಪ್ರಯತ್ನವಾಗಬೇಕಿದೆ. ಪ್ರತಿಯೊಬ್ಬರೂ ಸ್ವಾತಂತ್ರ್ಯೋತ್ಸವವನ್ನು ಹಬ್ಬದಂತೆ ಆಚರಿಸಬೇಕು. ಇದರ ಹಿಂದೆ ಸಾವಿರಾರು ಜನರ ತ್ಯಾಗ, ಬಲಿದಾನ, ಕಷ್ಟ ಎಲ್ಲವೂ ಅಡಗಿದೆ. ಅವರ ಬೆವರಿನ ಫಲವೇ ಇಂದಿನ ಸ್ವಾತಂತ್ರ್ಯ ಎಂದು ಹೇಳಿದರು. ಪ್ರತಿಯೊಬ್ಬರು ಶಿಸ್ತಿನಿಂದ ನಡೆದುಕೊಳ್ಳಬೇಕು ಶಿಸ್ತು ಮನುಷ್ಯನಿಗೆ ಜೀವನವನ್ನು ಕಲಿಸುತ್ತದೆ ಎಂದು ಹೆಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಬಿ.ಎಂ ಶಿವಲಿಂಗಯ್ಯ ಮತ್ತು ತಿಪ್ಪೇಸ್ವಾಮಿ ಎಸ್ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ನಾರಾಯಣಸ್ವಾಮಿ ಕೆ, ಎನ್.ಸಿ.ಸಿ ಅಧಿಕಾರಿ ಡಾ ಸದಾಶಿವಪ್ಪ, ಸಾಂಸ್ಕøತಿಕ ವೇದಿಕೆಯ ಸಂಚಾಲಕರಾದ ಡಾ.ಲತಾ ಎಸ್.ಎಂ, ಸರಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿ.ಕೆ ಕೊಟ್ರಪ್ಪ, ಕಾಲೇಜಿನ ಗೆಜೆಟೆಡ್ ಮ್ಯಾನೇಜರಾದ ಗೀತಾದೇವಿ ರವರು ಉಪಸ್ಥಿತರಿದ್ದರು.
ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಲಾಯಿತು.

ವಾಣಿಜ್ಯಶಾಸ್ತ್ರ ವಿಭಾಗದ ವೆಂಕಟೇಶ್ ಬಾಬು ನಿರೂಪಿಸಿದರು. ಡಾ. ಸೋಮಶೇಖರಪ್ಪ ಸ್ವಾಗತಿಸಿದರು. ಭೀಮಣ್ಣ ಸುಣಗಾರ್ ವಂದಿಸಿ ಕುಮಾರಿ ಹಸೀನಾ ರವರು ಪ್ರಾರ್ಥಿಸಿದರು. ಕಾಲೇಜಿನ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.