ಹರಪನಹಳ್ಳಿ: ಕುಡಿಯುವ ನೀರು, ಬೀದಿ ದೀಪ ಸ್ಥಾವರಗಳ ವಿದ್ಯುತ್ ಬಾಕಿ ಕಟ್ಟಲು ಬೆಸ್ಕಾಂ ಅಧಿಕಾರಿಗಳಿಂದ ಸೂಚನೆ

ಹರಪನಹಳ್ಳಿ : ಕುಡಿಯುವ ನೀರು ಮತ್ತು ಬೀದಿ ದೀಪ ಸ್ಥಾವರಗಳ ವಿದ್ಯುತ್ ಬಾಕಿ ಮೊತ್ತವು ಪಂಚಾಯತಿವಾರು ಈ ಕೆಳಕಂಡಂತೆ ಇದ್ದು, ಪಂಚಾಯತಿ ಅಭಿವೃದ್ಧಿ, ಅಧಿಕಾರಿಗಳು Escrow 15ನೇ ಹಣಕಾಸು ಖಾತೆಯಲ್ಲಿ ಬಿಡುಗಡೆಯಾದ ಅನುದಾನದ ಮೊತ್ತವನ್ನು…

ಹರಪನಹಳ್ಳಿ : ಕುಡಿಯುವ ನೀರು ಮತ್ತು ಬೀದಿ ದೀಪ ಸ್ಥಾವರಗಳ ವಿದ್ಯುತ್ ಬಾಕಿ ಮೊತ್ತವು ಪಂಚಾಯತಿವಾರು ಈ ಕೆಳಕಂಡಂತೆ ಇದ್ದು, ಪಂಚಾಯತಿ ಅಭಿವೃದ್ಧಿ, ಅಧಿಕಾರಿಗಳು Escrow 15ನೇ ಹಣಕಾಸು ಖಾತೆಯಲ್ಲಿ ಬಿಡುಗಡೆಯಾದ ಅನುದಾನದ ಮೊತ್ತವನ್ನು ಬೆ.ವಿ.ಕಂ ಗೆ ಪಾವತಿಸುವಂತೆ ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಹೌದು, ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬೆಸ್ಕಾಂ ಅಧಿಕಾರಿಗಳು, ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ ನಿಗಮ ಕಛೇರಿ ಬೆಂಗಳೂರು ರವರ ಆದೇಶದನ್ವಯ ಮತ್ತು ಘನ ಕರ್ನಾಟಕ ವಿದ್ಯುತ್‌ ನಿಯಂತ್ರಣಾ ಆಯೋಗದ ನಿಯಮ Clause 29,06 ರಂತೆ ವಿಜಯನಗರ ಜಿಲ್ಲೆ, ಹರಪನಹಳ್ಳಿ ತಾಲ್ಲೂಕು,  ಹರಪನಹಳ್ಳಿ ಉಪ ವಿಭಾಗದ ವ್ಯಾಪ್ತಿಗೆ ಬರುವ ಕುಡಿಯುವ ನೀರು ಮತ್ತು ಬೀದಿ ದೀಪ ಸ್ಥಾವರಗಳ ವಿದ್ಯುತ್ ಬಾಕಿ ಮೊತ್ತವು ಪಂಚಾಯತಿವಾರು ಈ ಕೆಳಕಂಡಂತೆ ಇದ್ದು, ಪಂಚಾಯತಿ ಅಭಿವೃದ್ಧಿ, ಅಧಿಕಾರಿಗಳು Escrow 15ನೇ ಹಣಕಾಸು ಖಾತೆಯಲ್ಲಿ ಬಿಡುಗಡೆಯಾದ ಅನುದಾನದ ಮೊತ್ತವನ್ನು ಬೆ.ವಿ.ಕಂ ಗೆ ಪಾವತಿಸದೇ ಇರುವ ಪಂಚಾಯತಿಯ ಕಚೇರಿ,
ಕುಡಿಯುವ ನೀರು ಮತ್ತು ಬೀದಿ ದೀಪ ಸ್ಥಾವರಗಳ ವಿದ್ಯುತ್ ನಿಲುಗಡೆಗೊಳಿಸಬಹುದು ಎಂದು ಆದೇಶಿಸಿರುವದರಿಂದ, ಈಗಾಗಲೇ ಸಂಬಂಧಪಟ್ಟ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ವಿದ್ಯುತ್‌ ನಿಲುಗಡೆ ನೋಟೀಸ್ ಜಾರಿಮಾಡಿದ್ದು, ವಿದ್ಯುತ್‌ ನಿಲುಗಡೆಗೆ ಅವಕಾಶ
ನೀಡದಂತೆ ಕೂಡಲೇ ಅನುದಾನದ ಮೊತ್ತವನ್ನು ಬೆ.ವಿ.ಕಂ ಗೆ, ಪಾವತಿಸುವುದು, ತಪ್ಪಿದ್ದಲ್ಲಿ ಕುಡಿಯುವ ನೀರು ಮತ್ತು ಬೀದಿ ದೀಪ
ಸ್ಥಾವರಗಳ ವಿದ್ಯುತ್‌ ಕಡಿತಗೊಳಿಸುವುದು ಅನಿವಾರ್ಯವಾಗುವುದೆಂದು ಮತ್ತು ವಿದ್ಯುತ್‌
ನಿಲುಗಡೆಯಿಂದ ಸಾರ್ವಜನಿಕರಿಗೆ ಆಗುವ ತೊಂದರೆಗೆ ಬೆಸ್ಕಾಂ ಜವಾಬ್ದಾರರಾಗುವುದಿಲ್ಲವೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

ಪಂಚಾಯತಿವಾರು ಕುಡಿಯುವ ನೀರು ಮತ್ತು ಬೀದಿ ದೀಪ ಸ್ಥಾವರಗಳ ವಿದ್ಯುತ್‌ ಬಿಲ್ ಈ ಕೆಳಗಿನಂತಿದೆ :

Vijayaprabha Mobile App free

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.