ಎಸ್ಸಿ, ಎಸ್ಟಿ ಕಾಲೋನಿಗಳ ಅಭಿವೃದ್ಧಿ; ಹಣ ವ್ಯರ್ಥವಾಗದಂತೆ ನೋಡಿಕೊಳ್ಳಿ: ಸಂಸದ ವೈ.ದೇವೇಂದ್ರಪ್ಪ

Y Devendrappa vijayaprabha news Y Devendrappa vijayaprabha news

ಬಳ್ಳಾರಿ,ಜ.27: ಪರಿಶಿಷ್ಟ ವರ್ಗಗಳ ಕಾಲೋನಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಿಡುಗಡೆಯಾಗಿರುವ ಅನುದಾನವನ್ನು ನಿಗದಿಪಡಿಸಿದ ಅವಧಿಯೊಳಗೆ ಯಾವ ಉದ್ದೇಶಕ್ಕೆ ಬಿಡುಗಡೆ ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಖರ್ಚು ಮಾಡಬೇಕು;ಯಾವುದೇ ರೀತಿಯಲ್ಲಿ ಹಣ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಂಸದ ವೈ.ದೇವೇಂದ್ರಪ್ಪ ಅವರು ಸೂಚನೆ ನೀಡಿದರು.

ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಮೇಲ್ವಿಚಾರಣಾ ಸಮಿತಿ(ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಹಿಂದಿನ ಸಂಸದರಾಗಿದ್ದ ಬಿ.ಶ್ರೀರಾಮುಲು ಮತ್ತು ವಿ.ಎಸ್.ಉಗ್ರಪ್ಪ ಅವರ ಅವಧಿಯಲ್ಲಿನ ಅನುದಾನದಡಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಪ್ರಧಾನಮಂತ್ರಿ ಆದರ್ಶ ಗ್ರಾಪಂ ಯೋಜನೆ ಅಡಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ಪರಿಶೀಲನೆಗೆ ಸಮಯ ನಿಗದಿಪಡಿಸುವಂತೆ ಸಂಸದರಾದ ದೇವೇಂದ್ರಪ್ಪ,ಕರಡಿ ಸಂಗಣ್ಣ, ಡಾ.ಸೈಯದ್ ನಾಸೀರ್ ಹುಸೇನ್ ಅಧಿಕಾರಿಗಳಿಗೆ ತಿಳಿಸಿದ ಅವರು ಸರಕಾರದ ಕಾರ್ಯಕ್ರಮಗಳ ಉದ್ಘಾಟನೆ ಸಂದರ್ಭದಲ್ಲಿ ಜನಪ್ರತಿನಿಧಿಗಳನ್ನು ಕಡೆಗಣಿಸದಂತೆ ಅವರು ಸೂಚನೆ ನೀಡಿದರು.

Advertisement

ವಸತಿ ಯೋಜನೆಗಳ ಫಲಾನುಭವಿಗಳ ಪಟ್ಟಿ:10 ದಿನಗಳಲ್ಲಿ ಸರಕಾರಕ್ಕೆ ಸಲ್ಲಿಕೆ:

ಜಿಲ್ಲೆಯಲ್ಲಿರುವ ಎಲ್ಲ 100 ಗ್ರಾಪಂಗಳಲ್ಲಿ ಗ್ರಾಮಸಭೆ ಕರೆದು ಈಗಾಗಲೇ ಬಸವ ವಸತಿ, ಅಂಬೇಡ್ಕರ್ ವಸತಿ ಯೋಜನೆ ಅಡಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಸರಕಾರಕ್ಕೆ ಇನ್ನೂ 10 ದಿನದೊಳಗೆ ಸಲ್ಲಿಸಲಾಗುತ್ತಿದೆ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ ಅವರು ಸಂಸದರಿಗೆ ವಿವರಿಸಿದರು.

3 ಕೆಟಗಿರಿ ಅಡಿ ಮತ್ತು ಗ್ರಾಪಂ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಅಂದರೇ 25ಕ್ಕಿಂತ ಹೆಚ್ಚು 50 ಗ್ರಾಪಂ ಸದಸ್ಯರೊಳಗಿರುವ, 25ರಿಂದ 15ಸದಸ್ಯರೊಳಗಿರುವ ಹಾಗೂ 15ರೊಳಗಿರುವ ಗ್ರಾಪಂ ಸದಸ್ಯರ ಪಟ್ಟಿ ಅನುಸಾರ ಬಸವ,ಅಂಬೇಡ್ಕರ್ ವಸತಿ ಯೋಜನೆ ಅಡಿ ವಸತಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
2020-21 ಮತ್ತು 22ನೇ ಸಾಲಿನಿ ಪ್ರಧಾನಮಂತ್ರಿಗಳ ಆವಾಸ್ ಯೋಜನೆ ಅಡಿ ಯಾವುದೇ ಗುರಿ ನಿಗದಿಪಡಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

48.89 ಕೋಟಿ ರೂ.ಪರಿಹಾರ ನೀಡಿಕೆ:ಬಳ್ಳಾರಿ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ 59646.23 ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆಹಾನಿಯಾಗಿದ್ದು,48068 ರೈತರಿಗೆ ನಿಯಮಾವಳಿಗಳನ್ವಯ 48.89ಕೋಟಿ ರೂ.ಪರಿಹಾರ ಪಾವತಿಸಲಾಗಿದೆ ಎಂದು ಕೃಷಿ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ ಅವರು ಸಂಸದರಿಗೆ ವಿವರಿಸಿದರು.
ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ; ನಮ್ಮಲ್ಲಿ ಸಾಕಷ್ಟು ಪ್ರಮಾಣದ ರಸಗೊಬ್ಬರವಿದೆ ಎಂದು ಸಂಸದರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಈ ವರ್ಷದ ಅಂತ್ಯಕ್ಕೆ ಬಳ್ಳಾರಿ ಮುಂಡರಗಿ ಆಶ್ರಯ ಬಡಾವಣೆಯ ಜಿ+2 ಮನೆಗಳ ಹಂಚಿಕೆ:

ಪ್ರಧಾನಮಂತ್ರಿ ಆವಾಸ್ ಯೋಜನೆ(ನಗರ ಪ್ರದೇಶ) ಅಡಿ ಬಳ್ಳಾರಿ,ಸಂಡೂರು,ಕಂಪ್ಲಿ,ತೆಕ್ಕಲಕೋಟೆ,ಸಿರಗುಪ್ಪ,ಕುರುಗೋಡು,ಕುರೇಕುಪ್ಪದ ನಿರ್ಮಿಸಲಾಗಿರುವ ಮನೆಗಳ ಪ್ರಗತಿಯನ್ನು ಸಂಸದರಾದ ವೈ.ದೇವೇಂದ್ರಪ್ಪ,ಕರಡಿ ಸಂಗಣ್ಣ, ಡಾ.ಸೈಯದ್ ನಾಸೀರ್ ಹುಸೇನ್ ಅವರು ಪರಿಶೀಲಿಸಿ ಕೆಲ ಅಗತ್ಯ ಸಲಹೆ-ಸೂಚನೆಗಳನ್ನು ಇದೇ ಸಂದರ್ಭದಲ್ಲಿ ನೀಡಿದರು.

ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ಬಳ್ಳಾರಿ ನಗರದಲ್ಲಿ 5616 ಜಿ+2 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, 3298 ಫಲಾನುಭವಿಗಳನ್ನು ನಗರ ಆಶ್ರಯ ಸಮಿತಿಯಲ್ಲಿ ಆಯ್ಕೆ ಮಾಡಲಾಗಿದೆ. 2389 ಫಲಾನುಭವಿಗಳ ಮಾಹಿತಿಯನ್ನು ಬ್ಯಾಂಕ್‍ಗಳಿಗೆ ಸಲ್ಲಿಸಲಾಗಿದ್ದು, ಸಾಲಮಂಜೂರಾತಿ ಪತ್ರ ಕೂಡ ನೀಡಲಾಗಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಅವರು ವಿವರಿಸಿದರು.

ಕಾಮಗಾರಿ ಭರದಿಂದ ನಡೆಯುತ್ತಿದ್ದು, ಕುಡಿಯುವ ನೀರು ಮತ್ತು ಒಳಚರಂಡಿಗೆ ಟೆಂಡರ್ ಕರೆಯಲಾಗಿದೆ. ಎಲೆಕ್ಟ್ರಿಸಿಟಿ ಸಂಪರ್ಕ ಕಲ್ಪಿಸಲಾಗುತ್ತಿದೆ. ಈ ವರ್ಷದ ಅಂತ್ಯಕ್ಕೆ 2389 ಫಲಾನುಭವಿಗಳಿಗೆ ಮನೆ ನೀಡಲು ಉದ್ದೇಶಿಸಲಾಗಿದೆ ಎಂದರು.

ನಗರ ಪ್ರದೇಶದಲ್ಲಿ ಶೇ.100ರಷ್ಟು ಮನೆ-ಮನೆ ಕಸ ಸಂಗ್ರಹ:

ಜಿಲ್ಲೆಯಲ್ಲಿರುವ ಎಲ್ಲ ನಗರ ಪ್ರದೇಶಗಳಲ್ಲಿ ಶೇ.100ರಷ್ಟು ಮನೆ-ಮನೆ ಕಸ ಸಂಗ್ರಹ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಅವರು ತಿಳಿಸಿದರು.

ಎಸ್‍ಡಬ್ಲ್ಯೂಎಂ ಅಡಿ 60 ಸಿವಿಲ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು 46 ಕಾಮಗಾರಿ ಪೂರ್ಣಗೊಂಡಿವೆ.465 ವಾಹನಗಳನ್ನು ಖರೀದಿಸಲು ಉದ್ದೇಶಿಸಲಾಗಿದ್ದು 457 ವಾಹನಗಳನ್ನು ಈಗಾಗಲೇ ಖರೀದಿಸಲಾಗಿದೆ ಮತ್ತು 125 ಯಂತ್ರಗಳನ್ನು ಖರೀದಿಸಲು ತೀರ್ಮಾನಿಸಲಾಗಿತ್ತು;119 ಯಂತ್ರಗಳು ಖರೀದಿಸಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಕಾರ್ಯ ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ ಎಂದರು.

ಬಳ್ಳಾರಿ-ವಿಜಯನಗರ ಜಿಲ್ಲೆಗಳಲ್ಲಿರುವ 237 ಗ್ರಾಪಂಗಳ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿಯೂ ಸ್ವಚ್ಛ ಭಾರತ ಮಿಶನ್(ಗ್ರಾಮೀಣ) ಅಡಿ ಘನ,ದ್ರವ ತ್ಯಾಜ್ಯ ನಿರ್ವಹಣೆಗೆ ಒತ್ತು ನೀಡಲಾಗಿದೆ ಎಂದು ಜಿಪಂ ಯೋಜನಾ ನಿರ್ದೇಶಕ ಜಾನಕಿರಾಂ ಅವರು ವಿವರಿಸಿದರು.

ಜಲಜೀವನ ಮಿಶನ್ ಯೋಜನೆ ಅಡಿ 92 ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗಿದ್ದು,88 ಪ್ರಾರಂಭಿಸಲಾಗಿದ್ದು, 30 ಪೂರ್ಣಗೊಂಡಿದ್ದು,58 ಪ್ರಗತಿಯಲ್ಲುವೆ ಎಂದು ಜಲಜೀವನ ಮಿಶನ್ ಅಧಿಕಾರಿಗಳು ಸಭೆಗೆ ವಿವರಿಸಿದರು. 2021-22ನೇ ಸಾಲಿನಡಿ 106 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಜಲಜೀವನ ಮಿಶನ್ ಯೋಜನೆ ಅಡಿ ಕೈಗೆತ್ತಿಕೊಂಡ ಕಾಮಗಾರಿಗಳ ಪರಿಶೀಲನೆಗೆ ಸಂಸದರನ್ನು ಕರೆದುಕೊಂಡು ಹೋಗಿ ತೋರಿಸಿ ಮತ್ತು 2ಹಂತದ ವಿಸೃತ ಯೋಜನಾ ವರದಿ ನೀಡುವಂತೆ ಅಧಿಕಾರಿಗೆ ಸಂಸದರಾದ ಕರಡಿ ಸಂಗಣ್ಣ,ವೈ.ದೇವೆಂದ್ರಪ್ಪ,ಡಾ.ಸೈಯದ್ ನಾಸೀರ್ ಹುಸೇನ್ ಅವರು ಸೂಚಿಸಿದರು.

ಕಾಮಗಾರಿಗಳ ನಿಗದಿಪಡಿಸಿದ ಅವಧಿಯಲ್ಲಿ ಮುಗಿಸದ್ದಕ್ಕೂ, ಆರಂಭಿಸದಕ್ಕೂ, ಸಭೆಗೆ ಗೈರು ಹಾಜರಾಗುವುದಕ್ಕೂ ಕೋವಿಡ್ ನೆಪ ಹೇಳುವುದು ಬಿಡಿ; ಕೋವಿಡ್ ಇದೇ ಅಂತ ಊಟ ಮಾಡುವುದು,ದೈನಂದಿನ ಜೀವನ ನಡೆಸುವುದನ್ನು ಬಿಟ್ಟಿದ್ದೇವೆ ಎಂದು ಪ್ರಶ್ನಿಸಿದ ಸಂಸದ ದೇವೆಂದ್ರಪ್ಪ ಅವರು ನಿಗದಿಪಡಿಸಿದ ಅವಧಿಯಲ್ಲಿ ಕಾಮಗಾರಿಗಳು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement