ಹೋಳಿ ಹಬ್ಬದ ವೇಳೆ ಹೆಚ್ಚಿನ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ವೀಕ್ಲಿ ಸ್ಪೆಷಲ್ ಟ್ರೈನ್ ಸಂಚಾರ

ಥಾಣೆ: 2025ರ ಹೋಳಿ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ಸೆಂಟ್ರಲ್ ರೈಲ್ವೆಯ ಸಹಯೋಗದಿಂದ ವಾರಕ್ಕೊಮ್ಮೆ ಸ್ಪೆಷಲ್ ಟ್ರೈನ್ ಚಲಾಯಿಸಲು ನಿರ್ಧರಿಸಲಾಗಿದೆ.  ಟ್ರೈನ್ ನಂ.01063 ಲೋಕಮಾನ್ಯ ತಿಲಕ (ಟಿ) – ತಿರುವನಂತಪುರಂ ನಾರ್ತ್…

ಥಾಣೆ: 2025ರ ಹೋಳಿ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ಸೆಂಟ್ರಲ್ ರೈಲ್ವೆಯ ಸಹಯೋಗದಿಂದ ವಾರಕ್ಕೊಮ್ಮೆ ಸ್ಪೆಷಲ್ ಟ್ರೈನ್ ಚಲಾಯಿಸಲು ನಿರ್ಧರಿಸಲಾಗಿದೆ. 

ಟ್ರೈನ್ ನಂ.01063 ಲೋಕಮಾನ್ಯ ತಿಲಕ (ಟಿ) – ತಿರುವನಂತಪುರಂ ನಾರ್ತ್ ವೀಕ್ಲಿ ಸ್ಪೆಷಲ್ 

ಈ ಟ್ರೈನ್ ಲೋಕಮಾನ್ಯ ತಿಲಕ (ಟಿ) ನಿಂದ ಗುರುವಾರ, 06/03/2025 ಮತ್ತು 13/03/2025 ರಂದು ಮಧ್ಯಾಹ್ನ 4:00 ಗಂಟೆಗೆ ಪ್ರಾರಂಭವಾಗುತ್ತದೆ. ಇದು ಮರುದಿನ ರಾತ್ರಿ 10:45 ಗಂಟೆಗೆ ತಿರುವನಂತಪುರಂ ನಾರ್ತ್ ತಲುಪುತ್ತದೆ.

Vijayaprabha Mobile App free

ಟ್ರೈನ್ ನಂ. 01064 ತಿರುವನಂತಪುರಂ ನಾರ್ತ್ – ಲೋಕಮಾನ್ಯ ತಿಲಕ (ಟಿ) ವಾರಕ್ಕೊಮ್ಮೆ ಸ್ಪೆಷಲ್

ಈ ಟ್ರೈನ್ ತಿರುವನಂತಪುರಂ ನಾರ್ತ್ ನಿಂದ ಶನಿವಾರ, 08/03/2025 ಮತ್ತು 15/03/2025 ರಂದು ಮಧ್ಯಾಹ್ನ 4:20 ಗಂಟೆಗೆ ಪ್ರಾರಂಭವಾಗುತ್ತದೆ. ಇದು ಮೂರನೇ ದಿನ ಮಧ್ಯರಾತ್ರಿ 12:45 ಗಂಟೆಗೆ ಲೋಕಮಾನ್ಯ ತಿಲಕ (ಟಿ) ತಲುಪುತ್ತದೆ.

ಹಾಲ್ಟ್ ನಿಲ್ದಾಣಗಳು: ಈ ಟ್ರೈನ್ ಥಾಣೆ, ಪನ್ವೇಲ್, ಪೆನ್, ರೋಹಾ, ಖೇಡ್, ಚಿಪ್ಲುನ್, ಸಂಗಮೇಶ್ವರ ರೋಡ್, ರತ್ನಾಗಿರಿ, ಕಂಕಾವಳಿ, ಸಿಂಧುದುರ್ಗ, ಕುಡಾಳ್, ಸಾವಂತವಾಡಿ ರೋಡ್, ಥಿವಿಮ್, ಕರ್ಮಾಳಿ, ಮಡಗಾವ್, ಕಾರವಾರ, ಗೋಕರ್ಣ ರೋಡ್, ಕುಮಟಾ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂಡೂರು, ಕುಂದಾಪುರ, ಉಡುಪಿ, ಸುರತ್ಕಲ್, ಮಂಗಳೂರು ಜಂ., ಕಾಸರಗೋಡ್, ಕಣ್ಣೂರು, ಕೊಜಿಕೋಡ್, ತಿರೂರ್, ಶೋರಣೂರು ಜಂ., ತ್ರಿಶೂರ್, ಎರ್ನಾಕುಲಂ ಟೌನ್, ಕೊಟ್ಟಯಂ, ತಿರುವಲ್ಲ, ಚೆಂಗನ್ನೂರು, ಮಾವೇಲಿಕರ, ಕಯಂಕುಳಂ ಮತ್ತು ಕೊಲ್ಲಂ ಜಂ. ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿದೆ.

ಟ್ರೈನ್ ಸಂಯೋಜನೆ: ಒಟ್ಟು 22 LHB ಕೋಚ್ಗಳನ್ನು ಹೊಂದಿರುವ ಟ್ರೈನ್‌ನಲ್ಲಿ ಸೆಕೆಂಡ್ ಎಸಿ-1, ಥರ್ಡ್ ಎಸಿ-6, ಸ್ಲೀಪರ್-9, ಜನರಲ್-4 ಹಾಗೂ 1 ಜನರೇಟರ್ ಕಾರ್ ಮತ್ತು 1 ಎಸ್ಎಲ್ಆರ್ ಕೋಚ್ ಇರಲಿವೆ.

ಮೇಲಿನ ಟ್ರೈನ್ಗಳ ಹಾಲ್ಟ್ ಮತ್ತು ಸಮಯದ ವಿವರಗಳಿಗಾಗಿ ದಯವಿಟ್ಟು www.enquiry.indianrail.gov.in ಅಥವಾ NTES ಅಪ್ಲಿಕೇಶನ್ ಡೌನ್ಲೋಡ್ ಮಾಡಿ, ಪ್ರಯಾಣಿಕರು ಈ ಸೇವೆಯನ್ನು ಪಡೆದುಕೊಳ್ಳುವಂತೆ ಕೋರಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.