ವಿಜಯನಗರ : ಹೊಸಪೇಟೆ ನಗರಸಭೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಮತ್ತು ಉಪಾಧ್ಯಕ್ಷ ಸೇರಿದಂತೆ ಒಟ್ಟು 70 ಜನರ ಮೇಲೆ ಪ್ರಕರಣ ದಾಖಲಾಗಿದೆ.
ಹೌದು, ಅಧ್ಯಕ್ಷೆ ಮತ್ತು ಉಪಾಧ್ಯಕ್ಷರ ಆಯ್ಕೆ ನಂತರ ಕರೋನ ನಿಯಮವನ್ನು ಉಲ್ಲಂಘನೆ ಮಾಡಿಕೊಂಡು ಮೆರೆವಣಿಗೆ ಬಂದಿದ್ದರಿಂದ ಅಧ್ಯಕ್ಷೆ ಸುಂಕಮ್ಮ ಮತ್ತು ಉಪಾಧ್ಯಕ್ಷ ಆನಂದ ಸೇರಿದಂತೆ 70 ಜನರ ಮೇಲೆ ಕೇಸ್ ದಾಖಲಾಗಿದೆ.
ಕರೋನ ನಿಯಮ ಉಲ್ಲಂಘನೆ, ಮಾಸ್ಕ ಹಾಕದೆ ಇರುವುದು, ಸಾಮಾಜಿಕ ಅಂತರವಿಲ್ಲದೆ ಮೆರವಣಿಗೆ ನಡೆಸಿದ್ದರಿಂದ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು, ಈ ರ್ಯಾಲಿಯಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ , ಬಳ್ಳಾರಿ-ವಿಜಯನಗರ ಸಂಸದರಾದ ವೈ ದೇವೇಂದ್ರಪ್ಪ ಕೂಡ ಭಾಗಿಯಾಗಿದ್ದರು.
ಇದನ್ನು ಓದಿ: ಹೊಸಪೇಟೆ ನಗರಸಭೆ: ಅಧ್ಯಕ್ಷರಾಗಿ ಸುಂಕಮ್ಮ ಉಪಾಧ್ಯಕ್ಷರಾಗಿ ಆನಂದ ಆಯ್ಕೆ