ಹನುಮಂತ ದೇವರ ಬ್ರಹ್ಮರಥೋತ್ಸವ: ಬಾಂಬ್ ನಿಷ್ಕ್ರಿಯದಳದಿಂದ ತಪಾಸಣೆ

ಭಟ್ಕಳ: ಶ್ರೀ ಚೆನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥೋತ್ಸವ ಅಂಗವಾಗಿ ಭಟ್ಕಳ ವಿವಿಧ ಭಾಗದಲ್ಲಿ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ತಪಾಸಣೆ ನಡೆಸಿದರು. ರಾಮನವಮಿಯ ಅಂಗವಾಗಿ ಜಿಲ್ಲೆಯ ಭಟ್ಕಳದ ಪ್ರಸಿದ್ದ ಚೆನ್ನಪಟ್ಟಣ ಹನುಮಂತ ದೇವರ…

ಭಟ್ಕಳ: ಶ್ರೀ ಚೆನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥೋತ್ಸವ ಅಂಗವಾಗಿ ಭಟ್ಕಳ ವಿವಿಧ ಭಾಗದಲ್ಲಿ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ತಪಾಸಣೆ ನಡೆಸಿದರು.

ರಾಮನವಮಿಯ ಅಂಗವಾಗಿ ಜಿಲ್ಲೆಯ ಭಟ್ಕಳದ ಪ್ರಸಿದ್ದ ಚೆನ್ನಪಟ್ಟಣ ಹನುಮಂತ ದೇವರ ಜಾತ್ರೆ ಸಹಸ್ರಾರು ಭಕ್ತ ವೃಂದದೊಂದಿಗೆ ನಡೆಯಲಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಭಟ್ಕಳದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಪೊಲೀಸ್‌ ಇಲಾಖೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದ್ದು ಕಾರವಾರದಿಂದ ಬಂದಿದ್ದ

ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ  ಬಾಂಬ್ ದಿಂದ ಈದ್ಗಾ ಮೈದಾನ, ಬಸ್ ನಿಲ್ದಾಣ, ಚೆನ್ನಪಟ್ಟಣ ಹನುಮಂತ ದೇವಸ್ಥಾನ ಒಳಗಡೆ, ದೇವಸ್ಥಾನ ಆವರಣ, ಭಟ್ಕಳ ರೈಲ್ವೆ ನಿಲ್ದಾಣಕ್ಕೆ ಸೇರಿದಂತೆ ವಿವಿಧ ಭಾಗಕ್ಕೆ ತೆರಳಿ ತಪಾಸಣೆ ನಡೆಸಿದ್ದಾರೆ.

Vijayaprabha Mobile App free

ಈ ಸಂದರ್ಭದಲ್ಲಿ ಎಆರ್‌ಎಸ್ಐಗಳಾದ ಅನಿಲ್ ನಾಯ್ಕ, ಜಗನ್ನಾಥ ನಾಯ್ಕ, ಸಿಬ್ಬಂದಿಗಳಾದ ಆನಂದಯ ನಾಯ್ಕ, ಸಂತೋಷ ನಾಯ್ಕ, ಮಹಾಬಲೇಶ್ವರ ಗೌಡ, ಹಾಲೇಶ ನಾಯ್ಕ, ಮಹೇಶ ನಾಯ್ಕ ಮತ್ತು ಶ್ವಾನ ಅನಶಿ ಇತ್ತು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.