ಭಟ್ಕಳ: ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮೂವರು ಆರೋಪಿಗಳ ಸಹಿತ ಬರೋಬ್ಬರಿ 9 ಕೆಜಿ ಗಾಂಜಾವನ್ನು ವಶಪಡಿಸಿಕೊಂಡ ಘಟನೆ ಭಟ್ಕಳದ ತೆಂಗಿನಗುಂಡಿ ಕ್ರಾಸ್ ಬಳಿ ನಡೆದಿದೆ. ಈ ವೇಳೆ ಓರ್ವ ಆರೋಪಿ ಪೊಲೀಸ್ ದಾಳಿ ವೇಳೆ ತಪ್ಪಿಸಿಕೊಂಡಿದ್ದಾನೆ.
ಸೆಂಟ್ರಲ್ ಲಾಡ್ಜ್ ಹಿಂಬದಿ ನಿವಾಸಿ ಸಯ್ಯದ್ ಅಕ್ರಮ ಮಹ್ಮಮದ್ ಹುಸೇನ್(24), ಗುಳ್ಮಿ ನಿವಾಸಿ ಅಬ್ದುಲ್ ರೆಹಮಾನ್ ಸಲಿಂ ಸಾಬ್ ಶೇಖ್(27), ಶಿರಸಿಯ ಕಸ್ತೂರಬಾ ನಗರ ನಿವಾಸಿ ಕಾರು ಚಾಲಕ ಅಜರುದ್ದೀನ್ ಮೆಹಬೂಬ್ ಸಾಬ್(41 ), ಭಟ್ಕಳದ ಉಸ್ಮಾನ್ ನಗರದ 2ನೇ ಕ್ರಾಸ್ ನಿವಾಸಿ ನಾಪತ್ತೆಯಾದ ಆರೋಪಿ ಖಾಸಿಂ ಅಬುಮಹ್ಮಮದ್ ಎಂದು ಗುರುತಿಸಲಾಗಿದೆ.
ಇವರು ಒರಿಸ್ಸಾದಿಂದ ಹೊನ್ನಾವರ ಮಾರ್ಗವಾಗಿ ಭಟ್ಕಳಕ್ಕೆ ಕಾರಿನ ಮೂಲಕ ಗಾಂಜಾ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಭಟ್ಕಳ ನಗರ ಠಾಣೆಯ ಎಸ್.ಐ. ನವೀನ ಎಸ್ ನಾಯ್ಕ ತಂಡದೊಂದಿಗೆ ತೆಂಗಿನಗುಂಡಿ ಕ್ರಾಸ್ ಬಳಿ ಕಾರು ತಡೆದು ಪರಿಶೀಲನೆ ನಡೆಸಿದ್ದು, 4 ಲಕ್ಷ 50 ಸಾವಿರ ಮೌಲ್ಯದ 9 ಕೆಜಿ 170 ಗ್ರಾಂ ಗಾಂಜಾ ಹಾಗೂ ಸಾಗಾಟ ಮಾಡುತ್ತಿದ್ದ ಹುಂಡೈ ಕಂಪನಿಯ ಕಾರನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಪಿ.ಎಸ್.ಐ ನವೀನ ನಾಯ್ಕ ಪ್ರಕರಣ ದಾಖಲಿಸಿದ್ದು. ಪಿ.ಎಸ್.ಐ ಶಿವಾನಂದ ನಾವಂದಗಿ ತನಿಖೆ ಕೈಗೊಂಡಿದ್ದಾರೆ.