ಹೊಸಪೇಟೆ(ವಿಜಯನಗರ ಜಿಲ್ಲೆ),ಜ.29: ಅರಣ್ಯ ಇಲಾಖೆ ಮತ್ತು ದರೋಜಿ ಕರಡಿಧಾಮದ ಸಹಯೋಗದಲ್ಲಿ ಚಿಂತನಾ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ, ಕೋಡಿಯಾಲ ಕಲಾತಂಡದ ಕಲಾವಿದರ ಮೂಲಕ ಕಮಲಾಪುರ ಸುತ್ತಮುತ್ತಲಿನ ವಿವಿಧ ಗ್ರಾಮಗಳಲ್ಲಿ ಬೀದಿನಾಟಕದ ಮೂಲಕ ಅರನ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು.
ಕಮಲಾಪುರ ಸುತ್ತಮುತ್ತಲಿನ ದೇವಲಾಪುರ, ಹೊಸಚಿನ್ನಾಪುರ ಹಾಗೂ ಧರ್ಮಸಾಗರ, ಬುಕ್ಕಸಾಗರ, ವೆಂಕಟಾಪುರ, ಇಪ್ಪಿತೇರಿ ಹಾಗೂ ಇನ್ನೀತರ ಗ್ರಾಮಗಳಲ್ಲಿ ಅರಿವು ಮೂಡಿಸಲಾಯಿತು.
ಸಾರ್ವಜನಿಕರಿಗೆ ಬೆಂಕಿ ಮತ್ತು ಕಾಡ್ಗಿಚ್ಚಿನಿಂದ ಅರಣ್ಯ, ವನ್ಯ ಜೀವಿ ಮತ್ತು ಪ್ರಾಣಿ-ಪಕ್ಷಿಗಳ ರಕ್ಷಣೆ, ಮಾನವ ಹಾಗೂ ಪ್ರಾಣಿ ಸಂಘರ್ಷ ಮತ್ತು ಅರಣ್ಯ ಕಾಯ್ದೆ, ವನ್ಯ ಜೀವಿ ಕಾಯ್ದೆ ಕುರಿತಂತೆ ಕಲಾವಿದರು ಬೀದಿನಾಟಕದ ಮೂಲಕ ಅರಿವು ಮೂಡಿಸಿದರು.
ಅರಣ್ಯ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಬೀದಿನಾಟಕದಲ್ಲಿ ಮೂಲಕ ಕಲಾವಿದರು ಪ್ರಸ್ತುತಪಡಿಸಿದರು.ಅರಣ್ಯಕ್ಕೆ ಹೊಂದಿರುವ ವಿವಿಧ ಗ್ರಾಮಗಳಲ್ಲಿ ಬೀದಿನಾಟಕದ ಮೂಲಕ ಕಲಾವಿದರು ಜಾಗೃತಿ ಮೂಡಿಸಿದರು.
ದರೋಜಿ ಕರಡಿಧಾಮ ವನ್ಯಜೀವಿ ವಲಯ ಹಾಗೂ ಕಮಲಾಪುರ ವಲಯ ಅರಣ್ಯಾಧಿಕಾರಿ ಎಂ.ಉಷಾ ಅವರು ಮಾತನಾಡಿ, ಬೀದಿನಾಟಕದ ಮೂಲಕ ಅರಣ್ಯ ಸಂರಕ್ಷಣೆ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಕುರಿತು ಜನರಿಗೆ ತಿಳಿಸುವುದರ ಜತೆಗೆ ಅರಣ್ಯ ಮತ್ತು ಪರಿಸರ ಸಂರಕ್ಷಣೆಯಲ್ಲಿ ಜನರು ಭಾಗಿಯಾಗಬೇಕೆಂದು ಮನವಿ ಮಾಡಿದರು.
ಬೀದಿನಾಟಕದ ಮೂಲಕ ಜಾಗೃತಿ ಕಾರ್ಯಕ್ರಮವು ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಂ.ಸಿ.ಸಿದ್ರಾರಾಮಪ್ಪ ಚಳಕಾಪುರೆ ಹಾಗೂ ಹೊಸಪೇಟೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಟಿ.ಭಾಸ್ಕರ್ ರವರ ಸಲಹೆಯಂತೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈ ಸಂಧರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿಯಾದ ಸಂತೋಷ್ ಕೆ.ನಂದಿಗಟ್ಟಿ ಮತ್ತು ಹೆಚ್.ಪಿ. ಜಗದೀಶ, ಅರಣ್ಯ ರಕ್ಷಕ ವಿಶ್ವನಾಥ ಎಸ್.ಹಿರೇಮನಿ, ಅರಣ್ಯ ಕಾವಲುಗಾರರಾದ ಕೆ.ಎಸ್.ಕುಮಾರಸ್ವಾಮಿ, ರಮೇಶ, ಅಂಜಿನಯ್ಯ, ಮಾರುತಿ, ಹನುಮಂತ, ವೆಂಕಟೇಶ, ಹೊನ್ನುರಪ್ಪ, ಹನುಮಜ್ಜ, ಹುಲಿಗೇಶ,ಕಲಾವಿದರು ಮತ್ತು ಗ್ರಾಮಸ್ಥರು ಇದ್ದರು.