ಉಚ್ಚಂಗಿದುರ್ಗ: ಅಣ್ಣನೇ ತನ್ನ ತಂಗಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ಸಮೀಪದ ಬಳ್ಳಾರಿ ಜಿಲ್ಲೆ, ಹರಪನಹಳ್ಳಿ ತಾಲೂಕು, ಉಚ್ಚನಗಿದುರ್ಗದ ಹತ್ತಿರ ಕರಡಿದುರ್ಗ ಗ್ರಾಮದಲ್ಲಿ ನಡೆದಿದೆ. ತಂಗಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರಡಿದುರ್ಗ ಗ್ರಾಮದ ಹನುಮಂತ ಆರೋಪಿಯಾಗಿದ್ದು, ಆತನ ತಂಗಿ ರತ್ನಮ್ಮ (28) ಗಂಭೀರ ಗಾಯಗೊಂಡವರಾಗಿದ್ದಾರೆ. ಹನುಮಂತಪ್ಪ ಅವರ ತಂಗಿ ರತ್ನಮ್ಮಗೆ ಮದುವೆಯಾಗಿತ್ತು. ಐದು ವರ್ಷಗಳ ಹಿಂದೆ ಪತಿಯನ್ನು ಬಿಟ್ಟು ತವರು ಮನೆ ಸೇರಿದ್ದರು.
ರತ್ನಮ್ಮ ಈಚೆಗೆ ವ್ಯಕ್ತಿಯೊಬ್ಬರ ಜತೆಗೆ ಸಂಬಂಧ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು ಎಂದು ತಿಳಿದು ಮನೆಯಲ್ಲಿ ಜಗಳ ನಡೆಯುತ್ತಿತ್ತು. ಈ ಉದ್ದೇಶದಿಂದ ಜಗಳ ತಾರಕಕ್ಕೇರಿ ಹನುಮಂತಪ್ಪ ತನ್ನ ರತ್ನಮ್ಮ ಅವರನ್ನು ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.
ಆರೋಪಿ ಹನುಮಂತ ಪರಾರಿಯಾಗಿದ್ದು, ಅರಸೀಕೆರೆ ಪೊಲೀಸ್ ಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.