ದಾವಣಗೆರೆ: ವನ್ಯಜೀವಿ ಬೇಟೆಯಾಡಲು ಬಲೆ ಹಾಕಿದ್ದ ಆರೋಪಿಗಳ ಬಂಧನ

ದಾವಣಗೆರೆ ಜು.29 : ದಾವಣಗೆರೆ ಪ್ರಾದೇಶಿಕ ವಿಭಾಗದ ಜಗಳೂರು ರಾಜ್ಯ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಜುಲೈ 26 ರಂದು ಮರೇನಹಳ್ಳಿ ಸರ್ವೆ ನಂ.22 ರ ಖಾಸಗಿ ಜಮೀನಿನಲ್ಲಿ ವನ್ಯಜೀವಿಗಳನ್ನು ಬೇಟೆಯಾಡಲು ಬಲೆಗಳನ್ನು ಹಾಕಿದ್ದ ಆರೋಪಿಗಳನ್ನು…

Jagaluru Zonal Forest Officer vijayaprabha news

ದಾವಣಗೆರೆ ಜು.29 : ದಾವಣಗೆರೆ ಪ್ರಾದೇಶಿಕ ವಿಭಾಗದ ಜಗಳೂರು ರಾಜ್ಯ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಜುಲೈ 26 ರಂದು ಮರೇನಹಳ್ಳಿ ಸರ್ವೆ ನಂ.22 ರ ಖಾಸಗಿ ಜಮೀನಿನಲ್ಲಿ ವನ್ಯಜೀವಿಗಳನ್ನು ಬೇಟೆಯಾಡಲು ಬಲೆಗಳನ್ನು ಹಾಕಿದ್ದ ಆರೋಪಿಗಳನ್ನು ದಾವಣಗೆರೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಆರೋಪಿಯನ್ನು ಜಗಳೂರು ವಲಯ ಅರಣ್ಯಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಜಗಳೂರು ಪೋಲಿಸ್ ಸಿಬ್ಬಂದಿ ರವರ ಸಹಯೋಗದೊಂದಿಗೆ ಕಾರ್ಯಚರಣೆ ನಡೆಸಿ ಜಗಳೂರು ತಾಲ್ಲೂಕು ಬಸವೇಶ್ವರ ಬಡಾವಣೆ ಹನುಮಂತ ಬಿನ್ ನಾಗೇಶಪ್ಪ ಎಂಬ ಆರೋಪಿಯನ್ನು ಬಂಧಿಸಿ ವಶಕ್ಕೆ ಪಡೆಯಲಾಗಿದೆ.

ವನ್ಯಜೀವಿ ಕಾಯ್ದೆ 1972 ರ ಕಲಂಗಳ ಅನ್ವಯ ಕೇಸನ್ನು ದಾಖಲಿಸಿ ನ್ಯಾಯಾಲಯದ ಬಂಧನಕ್ಕೆ ಒಪ್ಪಿಸಿದ್ದು, ಮತ್ತೋರ್ವ ಆರೋಪಿ ಭರಮಸಾಗರದ ನಿವಾಸಿ ಕುಮಾರ ನಾಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳಿಂದ 3 ಬಲೆ, 1 ಬೈಕ್, 1 ಸುತ್ತಿಗೆ, 1 ಕುಡುಗೋಲು, 1 ಮೊಬೈಲ್ ವಶಕ್ಕೆ ಪಡೆದು ಸುರಕ್ಷತೆ ದೃಷ್ಠಿಯಿಂದ ಜಗಳೂರು ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಇರಿಸಲಾಗಿದೆ. ಮುಂದಿನ ತನಿಖೆಯನ್ನು ದಾವಣಗೆರೆ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ತಾಂತ್ರಿಕ ಸಹಾಯಕರು ಕೈಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.