ದಂಡಿ ದುರ್ಗಮ್ಮನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದ ಖ್ಯಾತ ನಾಟಕಕಾರ ಪೂಜಾರ್‌ ಚಂದ್ರಪ್ಪ ನಿಧನ: ಗ್ರಾಮಸ್ಥರ ಕಂಬನಿ

ಅರಸೀಕೆರೆ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದ ನಿವಾಸಿ, ಖ್ಯಾತ ನಾಟಕಕಾರ ಪೂಜಾರ್‌ ಚಂದ್ರಪ್ಪ (76) ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೇವಲ 2ನೇ ತರಗತಿ ಓದಿದ್ದರೂ ರಂಗಭೂಮಿ ಹಾಗೂ ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದರು.…

Arasikere poojar chandrappa death news

ಅರಸೀಕೆರೆ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದ ನಿವಾಸಿ, ಖ್ಯಾತ ನಾಟಕಕಾರ ಪೂಜಾರ್‌ ಚಂದ್ರಪ್ಪ (76) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕೇವಲ 2ನೇ ತರಗತಿ ಓದಿದ್ದರೂ ರಂಗಭೂಮಿ ಹಾಗೂ ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ದಂಡಿನ ದುರ್ಗಮ್ಮ ನಾಟಕದಲ್ಲಿ ಮೊದಲ ಬಾರಿಗೆ ದೇವಿ ಪಾತ್ರ ಮಾಡಿದ್ದರು. ಇದು ಎಷ್ಟು ಪ್ರಸಿದ್ಧವಾಗಿತ್ತು ಎಂದರೆ ರಾಜ್ಯಾದ್ಯಂತ 267 ಪ್ರದರ್ಶನ ಕಂಡಿತ್ತು. ಜಗಜ್ಯೋತಿ ಬಸವೇಶ್ವರ ಸೇರಿದಂತೆ ಅನೇಕ ನಾಟಕಗಳಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳು ಇವರ ಕಲಾಸೇವೆಗೆ ಸಂದಿವೆ.

ಅರಸೀಕೆರೆ ಗ್ರಾಮಸ್ಥರ ಕಂಬನಿ

Arasikere poojar chandrappa death news

Vijayaprabha Mobile App free

ಒಂದೊತ್ತಿನ ಊಟ ಮರೆತರೂ. ಹಣೆಯ ಮೇಲೆ ವಿಭೂತಿಯನ್ನು ಮರೆಯದೇ ಧರಿಸುತ್ತಿದ್ದ, ಸದಾ ಹಸನ್ಮುಖಿ ಶ್ರೀಯುತ ಪೂಜಾರ್ ಚಂದ್ರಪ್ಪ ನವರು,ನಮ್ಮ ಅರಸೀಕೆರೆಯ ಶ್ರೀ ದಂಡಿನ ದುರುಗಮ್ಮನ ಜಾತ್ರೆಯಲ್ಲಿ ,ಪ್ರದರ್ಶನಗೊಳ್ಳುತ್ತಿದ್ದ ದೇವಿ ಚರಿತ್ರೆಯ ನಾಟಕದಲ್ಲಿ, ದೇವಿ ಪಾತ್ರಕ್ಕೆ ಜೀವಕಳೆ ತುಂಬಿ ಅಭಿನಯಿಸುತ್ತಿದ್ದರು.

ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಸಾಂಸ್ಕೃತಿಕವಾಗಿ, ಕಲಾ ಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿ ಗ್ರಾಮಕ್ಕೆ ಹೆಸರು ತಂದುಕೊಟ್ಟಿದ್ದರು. ಕಲಾವಿದರಾಗಿ ಹತ್ತು ಹಲವು ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸುತ್ತಿದ್ದ ಶ್ರೀಯುತರು ಮನೆ ಮಾತಾಗಿದ್ದರು.

ನಾಡಿನ ನಾನಾ ಕಡೆ ಇದ್ದ ದೇವಿಯ ಭಕ್ತರುಗಳಿಗೆ ಚಿರಪರಿಚಿತರಾಗಿದ್ದ ಶ್ರೀಯುತರು ಈ ದಿವಸ ಬೆಳಿಗ್ಗೆ ದೈವಾಧೀನರಾದ ಸುದ್ದಿ ತಿಳಿದು.

ಹಳೆಯದೆಲ್ಲವೂ ಒಮ್ಮೆ ಆವರಿಸಿ,ಕಣ್ತುಂಬಿ ಬಂದಂತಾಯಿತು. ಶ್ರೀಯುತರ ಆತ್ಮಕ್ಕೆ ದೇವಿಯು ಶಾಂತಿಯನ್ನು ನೀಡಲಿ. ಮೃತರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲೀ…ಓಂ ಶಾಂತೀ ಸದ್ಗತಿ.

ಶಿಕ್ಷಕರಾದ ಅಂಗಡಿ ಶಾಂತಪ್ಪ ಅವರ ಫೇಸ್ ಬುಕ್ ಪುಟದಿಂದ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.