ಹೊಸಪೇಟೆ(ವಿಜಯನಗರ): ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು (ಜಿ.ಟಿ ಮತ್ತು ಟಿ.ಸಿ) ಮತ್ತು ಟೊಯೋಟಾ ಕಾರು ಉತ್ಪಾದನಾ ಕಂಪನಿಯ ಸಹಯೋಗದೊಂದಿಗೆ 2022-23ನೇ ಸಾಲಿನಲ್ಲಿ ಎ.ಎಸ್.ಡಿ.ಸಿ ಪ್ರಮಾಣೀಕರದ ಆಟೋಮೊಬೈಲ್ ವಲಯಗಳ ಪ್ರಾಯೋಗಿಕ ಆಧಾರಿತ ತರಬೇತಿ ಕೋರ್ಸುಗಳನ್ನು ಜಿಟಿಟಿಸಿ ಎಲ್ಲ ಕೇಂದ್ರಗಳಲ್ಲಿ ಪ್ರಾರಂಭಿಸಲಾಗಿದ್ದು, ಮೊದಲ 2ರಿಂದ 3 ತಿಂಗಳು ಬೇಸಿಕ್ ತರಬೇತಿಯನ್ನು ಜಿಟಿಟಿಸಿ ಕೇಂದ್ರಗಳಲ್ಲಿನ ನಂತರ 22 ತಿಂಗಳು ಟೊಯೋಟಾ ಕಾರು ಉತ್ಪಾದನಾ ಕಂಪನಿಯ ಗುರುಕುಲ ಸೌಲಭ್ಯದಲ್ಲಿ ಮತ್ತು ಉತ್ಪಾದನಾ ಘಟಕದಲ್ಲಿ ಅಂತರಾಷ್ಟ್ರೀಯ ಮಾನ್ಯತೆ ಪಡೆದ ತರಬೇತುದಾರರಿಂದ ಸ್ಟೈಪಂಡ್ ಸಹಿತ ಆಟೋಮೊಬೈಲ್‍ನ ಸೆಕ್ಟರ್‍ನ ತರಬೇತಿ ನೀಡಲಾಗುತ್ತಿದ್ದು, ಅಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮರಿಯಮ್ಮನಹಳ್ಳಿಯ ಜಿಟಿಟಿಸಿಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶೈಕ್ಷಣಿಕ ಅರ್ಹತೆ: ಐಟಿಐ ಪಾಸ್/ಪೇಲ್, ಡಿಪ್ಲೋಮಾ ಪಾಸ್/ಪೇಲ್, ಪಿಯುಸಿ ಪಾಸ್/ಪೇಲ್, ಅಥವಾ ಎಸೆಸ್ಸೆಲ್ಸಿ ಪಾಸ್ ಆಗಿರಬೇಕು. ಹಾಗೂ ಅವರ ವಯಸ್ಸು 18ರಿಂದ 23ವರ್ಷದೊಳಗಿರಬೇಕು. ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಜಿಟಿಟಿಸಿ(ಆಟೋಮೊಬೈಲ್ ಸ್ಕಿಲ್ ಡೆವಲಪ್‍ಮೆಂಟ್ ಕೌನ್ಸಿಲ್)ವತಿಯಿಂದ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸೌಲಭ್ಯಗಳು: ಟಿಕೆಮ್ ವತಿಯಿಂದ ಮಾಸಿಕ ಸ್ಟೈಪಂಟ್ ರೂ.12255/- ಸೇರಿದಂತೆ ಪೌಷ್ಟಿಕ ಆಹಾರವುಳ್ಳ ಉಚಿತ ಕ್ಯಾಂಟಿನ್ ಸೌಲಭ್ಯ, ಉಚಿತ ಸಮವಸ್ತ್ರ ಹಾಗೂ ಸಾರಿಗೆ ಸೌಲಭ್ಯ, ಸುರಕ್ಷಿತ ಮತ್ತು ಆರೋಗ್ಯಕರ ತರಬೇತಿ ಪರಿಸರ ಹೊಂದಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಆಸಕ್ತ ವಿದ್ಯಾರ್ಥಿಗಳು ಎಸೆಸ್ಸೆಲ್ಸಿ/ಐಟಿಐ/ಪಿಯುಸಿ ಅಂಕಪಟ್ಟಿಗಳು ಮತ್ತು ಆಧಾರ್‍ಕಾರ್ಡ್ ಸೇರಿದಂತೆ ಮೂಲ ಪ್ರತಿಗಳು ಹಾಗೂ ಇತ್ತಿಚಿನ ಒಂದು ಪಾಸ್ ಪೋಟೋ ಸೈಜ್ ಭಾವಚಿತ್ರವನ್ನು ತೆಗೆದುಕೊಂಡು ಆ.12ರಂದು ಮರಿಯಮ್ಮನಹಳ್ಳಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ನಡೆಯಲಿರುವ ಲಿಖಿತ ಪರೀಕ್ಷೆ ಹಾಗೂ ಸಂದರ್ಶನಕ್ಕೆ ಹಾಜರಾಗಬೇಕು ಎಂದು ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ: ಮರಿಯಮ್ಮನಹಳ್ಳಿಯ ಜಿಟಿಟಿಸಿಯ ಪ್ರಾಂಶುಪಾಲರು ಅವರು ಮೊ.ಸಂ.8073979750 ಹಾಗೂ ಜಿಟಿಟಿಸಿಯ ಕೌಶಲ್ಯ ಅಭಿವೃದ್ಧಿ ವಿಭಾಗ ಮುಖ್ಯಸ್ಥರು ಅವರ ಮೊ.ಸಂ.9902397658 ಗೆ ಸಂಪರ್ಕಿಸಬಹುದಾಗಿದೆ.