ದಾವಣಗೆರೆ ಜ. 03: ಸಿಡಾಕ್-ಉದ್ಯಮಶೀಲತಾ ಮಾರ್ಗದರ್ಶನಾ ಕೇಂದ್ರದಿಂದ ದಾವಣಗೆರೆ ಜಿಲ್ಲೆಯ ಪುರುಷ ಉದ್ಯಮಾಕಾಂಕ್ಷಿಗಳಿಗೆ 30 ದಿನಗಳ ಮೊಬೈಲ್ ಹ್ಯಾಂಡ್‍ಸೆಟ್ ರಿಪೇರಿ ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ಉದ್ಯಮಶೀಲತಾ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ಫೆ.11 ರಿಂದ ಪ್ರಾರಂಭಿಸಲು ಅರ್ಜಿ ಆಹ್ವಾನಿಸಲಾಗಿದ್ದು ಫೆ.8 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ.
ತರಬೇತಿ ಉಚಿತವಾಗಿದ್ದು ಶಿಬಿರಾರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಪ್ರಯಾಣಿಸಿ ಭಾಗವಹಿಸಬೇಕು ಹಾಗೂ ತರಬೇತಿ ಅವಧಿಯಲ್ಲಿ ಊಟೋಪಚಾರ ಒದಗಿಸಲಾಗುವುದು. ಆಸಕ್ತರು ಅರ್ಜಿ ಸಲ್ಲಿಸುವ ಹಾಗೂ ಇತರೆ ವಿವರಗಳಿಗಾಗಿ ತರಬೇತಿದಾರರಾದ ಸವಿತಾ, ಮೊಬೈಲ್ ಸಂಖ್ಯೆ: 9035229821 ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ದಾವಣಗೆರೆ ಸಿಡಾಕ್ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.