ದಾವಣಗೆರೆ ಜು.28: ಪರಿಶಿಷ್ಟ ಜಾತಿ ನಿರುದ್ಯೋಗಿ ಯುವಕ-ಯುವತಿಯರಿಗೆ 2020-21ನೇ ಸಾಲಿನ ಗುರಿಯಲ್ಲಿ ಟೆಲಿವಿಷನ್ ಜರ್ನಲಿಸಂ ತರಬೇತಿ, ವಿಡಿಯೋ ಜರ್ನಲಿಸಂ, ಕ್ಯಾಮರಮನ್ ನಿರೂಪಣೆ ವರದಿಗಾರಿಕೆ/ಕಾಫಿ ಎಡಿಟರ್ ಬುಲೇಟಿಂಗ್ ಪ್ರೊಡ್ಯುಸರ್ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ತರಬೇತಿಯನ್ನು ಬೆಂಗಳೂರಿನ ಕೇಂದ್ರ ಸ್ಥಾನದಲ್ಲಿ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಜುಲೈ.30 ಕೊನೆಯ ದಿನಾಂಕ ವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಂ.337/16ಎ-16 ಗಣೇಶ್ ಲೇಔಟ್ 1ನೇ ಕ್ರಾಸ್ಪಿ.ಬಿ ರಸ್ತೆ ದಾವಣಗೆರೆ ದೂ.ವಾ ಸಂಖ್ಯೆ: 08192-258678 ಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.