ದಾವಣಗೆರೆ ಆ.19: 2022-23 ನೇ ಸಾಲಿಗೆ ಸಮಗ್ರ ಶಿಕ್ಷಣ ಕರ್ನಾಟಕ ಸಮನ್ವಯ ಶಿಕ್ಷಣದ ಅನುಮೋದನೆ ಚಟುವಟಿಕೆಯಾದ ತೀವ್ರತರ ವಿಕಲತೆ ಹೊಂದಿರುವ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ದೈಹಿಕ ಚಿಕಿತ್ಸೆ ಫಿಜಿಯೋಥೆರಫಿ ಮಾಡಿಸುವ ಅಗತ್ಯತೆ ಇರುವುದರಿಂದ ತ್ರಿಸದಸ್ಯ ಸಮಿತಿಯಲ್ಲಿ ಆಯ್ಕೆ ಮಾಡಿ ಕ್ಷೇತ್ರ ಸಂಪನ್ಮೂಲ ಕೇಂದ್ರ, ದಾವಣಗೆರೆ ದಕ್ಷಿಣ ವಲಯದಲ್ಲಿ ಒಂದು ಹುದ್ದೆ ಡಿಪ್ಲೊಮೋ ಇನ್ ಫಿಜಿಯೋಥೆರಫಿ ಬ್ಯಾಚುಲರ್ ಆಫ್ ಫಿಜಿಯೋಥರಪಿ (ಬಿ.ಪಿ.ಟಿ) ಪಡೆದಿರಬೇಕು, ಬಿ.ಪಿ.ಟಿ ಪದವಿ ಪಡೆದವರು ಲಭ್ಯವಿಲ್ಲದಿದ್ದಲ್ಲಿ, ನುರಿತ ಅನುಭವವನ್ನ ಡಿಪ್ಲೊಮೊ ಇನ್ ಫಿಜಿಯೋಥೆರಫಿ (ಡಿ.ಪಿ.ಟಿ) ಪಡೆದವರನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಸೂಕ್ತ ವಿದ್ಯಾರ್ಹತೆಯುಳ್ಳ ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಆ.25 ಸಂಜೆ 05.30 ಗಂಟೆಯೊಳಗೆ ದಾವಣಗೆರೆ ದಕ್ಷಿಣ ವಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಮೋತಿವೀರಪ್ಪ ಕಾಲೇಜು ಆವರಣ, ವಿಶ್ವೇಶ್ವರಯ್ಯ ಪಾರ್ಕ್ ಎದುರು ಇರುವ ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿಗೆ ಅರ್ಜಿಯನ್ನು ಮುದ್ದಾಂ / ಅಂಚೆಯ ಮೂಲಕ ಸಲ್ಲಿಸುವುದು. ಅರ್ಜಿ ನಮೂನೆಯನ್ನು ಬಿ.ಆರ್.ಸಿ ಕಛೇರಿ ದಾವಣಗರ ದಕ್ಷಿಣ ವಲಯ ದಲ್ಲಿ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 9480695178, 9449910879 ಯನ್ನು ಸಂಪರ್ಕಿಸಬಹುದು ಎಂದು ದಾವಣಗೆರೆ ದಕ್ಷಿಣ ವಲಯದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಿಣಾಧಿಕಾರಿ ನಿರಂಜನಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.