ದಾವಣಗೆರೆ ಆ.29: ಸಮಗ್ರ ಶಿಕ್ಷಣ ಕರ್ನಾಟಕ ಸಮನ್ವಯ ಶಿಕ್ಷಣದ ಅನುಮೋದಿತ ಚಟಿವಟಿಕೆಯಾದ 6 ರಿಂದ 18 ವರ್ಷದೊಳಗಿನ ತೀವ್ರತರ ವಿಕಲತೆ ಹೊಂದಿರುವ ವಿಕಲಚೇತನ ವಿದ್ಯಾರ್ಥಿಗಳಿಗೆ ಭೌತಿಕ ಚಿಕಿತ್ಸೆಗಾಗಿ ಫಿಜಿಯೋಥೆರಪಿಸ್ಟ್ ಗಳ ಅಗತ್ಯತೆ ಇದ್ದು, ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿಯ ಎಸ್.ಆರ್.ಪಿ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಫಿಜಿಯೋಥೆರಪಿಸ್ಟ್‍ಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಡಿ.ಪಿ.ಟಿ, ಬಿ.ಪಿ.ಟಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಕೆಲಸ ಮತ್ತು ಪಾವತಿ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಆಸಕ್ತ ಅಭ್ಯರ್ಥಿಗಳು ದಾಖಲೆಗಳೊಂದಿಗೆ ಸೆಪ್ಟೆಂಬರ್ 09 ರೊಳಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕ್ಷೇತ್ರ ಸಂಪನ್ಮೂಲ ಕೇಂದ್ರ, ಕೆ.ಆರ್ ರಸ್ತೆ ದಾವಣಗೆರೆ ಉತ್ತರ ವಲಯ ಇಲ್ಲಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ 9480695179 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.