ಅರಸೀಕೆರೆ : ಅರಸೀಕೆರೆ ಸಮೀಪದ ತೌಡೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಎಚ್. ಜಿ. ಪರಮೇಶ್ವರಪ್ಪ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ ಎಸಗಿದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮದ ನೂರಾರು ರೈತರು ಬಳ್ಳಾರಿ – ವಿಜಯನಗರ ಸಂಸದ ವೈ. ದೇವೇಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಹೌದು, ತವಡೂರು ಗ್ರಾಮದ ‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನೂರಾರು ರೈತರು ಠೇವಣಿ ಇಟ್ಟಿದ್ದು, ದಶಕಗಳೇ ಕಳೆದಿದ್ದು, ಅದನ್ನು ಪಾವತಿ ಮಾಡಲು ಕಾರ್ಯದರ್ಶಿ ವಿವಿಧ ಕಾರಣಗಳನ್ನು ಹೇಳುತ್ತ ವಿಳಂಬ ಮಾಡಿದ್ದಾರೆ.
ಅನುಮಾನಗೊಂಡ ರೈತರು ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಭ್ರಷ್ಟಾಚಾರ ನಡೆದಿರುವ ಕುರಿತು ಬೆಳಕಿಗೆ ಬಂದಿದೆ’ ಎಂದಿದ್ದು, ‘ಸರ್ಕಾರದಿಂದ ರೈತರಿಗೆ ಸಾಲ ಮಂಜೂರಾತಿ ಆಗುವ ಮೊದಲೇ ಚೆಕ್‌ಗಳಿಗೆ ಸಹಿ ಮಾಡಿಸಿಕೊಂಡು, ಕಡಿಮೆ ಸಾಲ ನೀಡಿ ಹೆಚ್ಚುವರಿ ಹಣ ಪಡೆದು ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ..
ಇದುವರೆಗೂ ಅಂದಾಜು ₹50 ಲಕ್ಷದಿಂದ ₹1 ಕೋಟಿ ಭ್ರಷ್ಟಾಚಾರ ನಡೆದಿರುವ ಕುರಿತು ಮಾಹಿತಿ ಇದ್ದು, ಅವ್ಯವಹಾರ ಕುರಿತು ಕ್ರಮ ಕೈಗೊಳ್ಳುವಂತೆ ಸಂಘದ ಅಧ್ಯಕ್ಷ ಸಣ್ಣ ಕೆಂಚಪ್ಪ ಅವರಿಗೆ ತಿಳಿಸಿದ್ದರೂ, ಸಂಬಂಧವೇ ಇಲ್ಲ ಎನ್ನುವ ಹಾಗೆ ವರ್ತಿಸುತ್ತಿದ್ದಾರೆ’ ಎಂದು ಗ್ರಾಮದ ರೈತರು ದೂರಿದರು.




