ಕಾರವಾರ: ರಾಜ್ಯದ ಸ್ಮಾರಕಗಳ ಸಂರಕ್ಷಣೆ ಅಭಿವೃದ್ಧಿಗಾಗಿ ದತ್ತು ಪಡೆಯುವ “Adopt A Monument” ಯೋಜನೆಯಡಿಯಲ್ಲಿ, ಉತ್ತರ ಕನ್ನಡ ಜಿಲ್ಲೆಯ ಹಲವು ದೇವಸ್ಥಾನ ಹಾಗೂ ಸ್ಮಾರಕಗಳನ್ನು ಗುರುತಿಸಲಾಗಿದೆ.
ಅಂಕೋಲಾದ ಗಂಗಾ ಕಾಮೇಶ್ವರ ದೇವಸ್ಥಾನ, ಮೂರುಗದ್ದೆ ದೇವಸ್ಥಾನ, ಹೊನ್ನಾವರದ ರಾಮತೀರ್ಥ ಮತ್ತು ರಾಮಲಿಂಗ ಬಸವರಾಜದುರ್ಗಾ ದೇವಸ್ಥಾನ, ಶಿರಸಿಯ ಮುಸುಕಿನ ಬಾವಿಯ ದೇವಸ್ಥಾನ, ಮಹಾಂತಿ ಮಠ, ಸೋಂದಾ, ಶಂಕರನಾರಾಯಣ ದೇವಸ್ಥಾನ , ಕಾರವಾರದ ಸದಾಶಿವಗಡ ಕೋಟೆ ಸ್ಮಾರಕಗಳನ್ನು ಆಯ್ಕೆ ಮಾಡಲಾಗಿರುತ್ತದೆ.
ಜಿಲ್ಲೆಯ ಸುತ್ತ ಮುತ್ತಲಿನ ನೂರು ವರ್ಷಕ್ಕಿಂತ ಹಳೆಯ ಹಾಗೂ ಅಭಿವೃದ್ಧಿಗೊಳ್ಳದ ದೇವಾಲಯಗಳನ್ನು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ದತ್ತು ಪಡೆದು ಅಭಿವೃದ್ಧಿಗೊಳಿಸಲು ಆಸಕ್ತಿಯುಳ್ಳ NGO/trust/ಸರ್ಕಾರೇತರ ಸಂಘ ಸಂಸ್ಥೆಗಳು ಅಗತ್ಯ ದಾಖಲೆಗಳೊಂದಿಗೆ ಪ್ರವಾಸೋದ್ಯಮ ಇಲಾಖೆ ಕಾರವಾರ ಕಛೇರಿಗೆ ಅರ್ಜಿಯನ್ನು ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ 08380-221172 ಅಥವಾ ddtourismkarwar@gmail.com ಮೂಲಕ ಸಂಪರ್ಕಿಸುವಂತೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.