ದಾವಣಗೆರೆ: ಪ್ರಥಮ ವರ್ಷದ ಬಿ.ಎ, ಬಿ.ಕಾಂ, ಬಿ.ಎಸ್ಸಿ ಸೇರಿದಂತೆ ವಿವಿಧ ಸ್ನಾತಕ/ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ

ದಾವಣಗೆರೆ ಆ.,03: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 2022-23ನೇ ಶೈಕ್ಷಣಿಕ ಸಾಲಿನ (ಜುಲೈಅವೃತಿ) ಪ್ರಥಮ ವರ್ಷದ ಬಿ.ಎ/ಬಿ.ಕಾಂ, ಬಿ.ಎಸ್ಸಿ, ಬಿ.ಲಿಬ್‍ಐಎಸ್ಸಿ, ಬಿ.ಸಿ.ಎ, ಬಿ.ಬಿ.ಎ, ಎಂ.ಎ/ಎಂ.ಕಾಂ,ಎಂ.ಎ-ಎಂ.ಸಿ.ಜೆ, ಎಂ.ಲಿಬ್.ಐ.ಎಸ್ಸಿ, ಎಂ.ಬಿ.ಎ, ಎಂ.ಎಸ್ಸಿ, ಸ್ನಾತಕ/ಸ್ನಾತಕೋತ್ತರ ಪದವಿಗಳಿಗೆ ಮತ್ತು ಪಿ.ಜಿ.ಡಿಪ್ಲೋಮಾ/ಡಿಪ್ಲೋಮಾ/ಸರ್ಟಿಫಿಕೇಟ್,…

ದಾವಣಗೆರೆ ಆ.,03: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 2022-23ನೇ ಶೈಕ್ಷಣಿಕ ಸಾಲಿನ (ಜುಲೈಅವೃತಿ) ಪ್ರಥಮ ವರ್ಷದ ಬಿ.ಎ/ಬಿ.ಕಾಂ, ಬಿ.ಎಸ್ಸಿ, ಬಿ.ಲಿಬ್‍ಐಎಸ್ಸಿ, ಬಿ.ಸಿ.ಎ, ಬಿ.ಬಿ.ಎ, ಎಂ.ಎ/ಎಂ.ಕಾಂ,ಎಂ.ಎ-ಎಂ.ಸಿ.ಜೆ, ಎಂ.ಲಿಬ್.ಐ.ಎಸ್ಸಿ, ಎಂ.ಬಿ.ಎ, ಎಂ.ಎಸ್ಸಿ, ಸ್ನಾತಕ/ಸ್ನಾತಕೋತ್ತರ ಪದವಿಗಳಿಗೆ ಮತ್ತು ಪಿ.ಜಿ.ಡಿಪ್ಲೋಮಾ/ಡಿಪ್ಲೋಮಾ/ಸರ್ಟಿಫಿಕೇಟ್, ಕೋರ್ಸಗಳಿಗೆ ಪ್ರವೇಶಾತಿ ಪ್ರಕ್ರಿಯೆಯು ಈಗಾಗಲೇ ಜೂ.20 ರಿಂದ ಆರಂಭವಾಗಿರುತ್ತದೆ.

ಆಸಕ್ತ ವಿದ್ಯಾರ್ಥಿಗಳು ಕ.ರಾ.ಮು.ವಿ.ಯ ಅಧಿಕೃತ ವೆಬ್‍ಸೈಟ್ www.ksoumysuru.ac.in ಮೂಲಕ ಮೇಲ್ಕಂಡ ಪದವಿಗಳಿಗೆ / ಕೋರ್ಸಗಳಿಗೆ ಆನ್‍ಲೈನ್ ಅಡ್ಮಿಷನ್ ಪೋರ್ಟಲ್ ಮೂಲಕ ಅರ್ಜಿಯನ್ನು ಭರ್ತಿ ಮಾಡಿ, ದಾವಣಗೆರೆ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಆನ್‍ಲೈನ್ ಮುಖಾಂತರ ಪ್ರವೇಶಾತಿ ಶುಲ್ಕವನ್ನು ಪಾವತಿಸಿ ಪ್ರವೇಶಾತಿಯನ್ನು ಪಡೆಯಬಹುದಾಗಿದೆ. ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿನಿಯರಿಗೆ, ಡಿಫೆನ್ಸ್, ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ ಮತ್ತು ಆಟೋ/ಕ್ಯಾಬ್‍ಚಾಲಕರು ಮತ್ತು ಅವರ ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವುದು. ಕೋವಿಡ್-19 ನಿಂದ ಮೃತಪಟ್ಟವರ ಮಕ್ಕಳಿಗೆ, ತೃತೀಯ ಲಿಂಗಿಗಳಿಗೆ, ದೃಷ್ಠಿಹೀನ ವಿದ್ಯಾರ್ಥಿಗಳಿಗೆ (ಬಿ.ಇಡಿ, ಎಂ.ಬಿ.ಎ ಕೋರ್ಸ್‍ಗಳನ್ನು ಹೊರತುಪಡಿಸಿ) ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ.

ಅದುದರಿಂದ ದಾವಣಗೆರೆ, ಹಾವೇರಿ ಹಾಗೂ ಚಿತ್ರದುರ್ಗ ಜಿಲ್ಲೆಗಳ ಅಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‍ಸೈಟ್ www.ksoumysuru.ac.in ವೀಕ್ಷಿಸುವುದು ಅಥವಾ ಮೊ.ನಂ. 9916009318, 8095939359, 6363739884, 9008905457 ಕರೆ ಮಾಡುವುದು ನಂತರ ಕ.ರಾ.ಮು.ವಿ. ಪ್ರಾದೇಶಿಕ ಕೇಂದ್ರ ಜೆ.ಹೆಚ್.ಪಟೇಲ್ ಬಡಾವಣೆ, ಶ್ಯಾಮನೂರು ಹಿಂಬಾಗ, ನಾಗನೂರು ರಸ್ತೆಯಲ್ಲಿರುವ ಕಛೇರಿಗೆ ಖುದ್ದು ಭೇಟಿ ಮಾಡುವಂತೆ, ಪ್ರಾದೇಶಿಕ ನಿರ್ದೇಶಕರಾದ ಡಾ.ವಿಜಯ್ ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.