ಬೆಂಗಳೂರು: ಹೊಟೇಲ್ನಲ್ಲಿ ರುಚಿ ರುಚಿಯಾದ ತಿಂಡಿ ಸಿಗುತ್ತೆ ಎಂದು ತಿಂಡಿ ತಿನ್ನಲು ಹೋದ ಗ್ರಾಹಕರೊಬ್ಬರಿಗೆ ಅವರು ಆರ್ಡರ್ ಮಾಡಿದ್ದ ಇಡ್ಲಿಯಲ್ಲಿ ಜಿರಲೆ ಕಂಡುಬಂದಿದ್ದು, ಗ್ರಾಹಕ ಶಾಕ್ ಆಗಿದ್ದಾನೆ.
ನಗರದ ನಾರಾಯಣ ಹೃದಯಾಲಯ ಆಸ್ಪತ್ರೆ ಸಮೀಪದ ಬೊಮ್ಮಸಂದ್ರ ಬ್ರಾಹ್ಮಿನ್ಸ್ ವೆಜ್ ಕೆಫೆಯಲ್ಲಿ ಈ ಜಿರಲೆ ಟಿಫನ್ ಪತ್ತೆಯಾಗಿದೆ.
ಮನು ಎಂಬುವವರು ತಮ್ಮ ಸ್ನೇಹಿತರ ಜೊತೆ ಹೋಟೆಲ್ಗೆ ಹೋಗಿ ತಿಂಡಿ ತಿನ್ನಲು ಇಡ್ಲಿಯನ್ನು ಆರ್ಡರ್ ಮಾಡಿದ್ದರು. ಇಡ್ಲಿಗೆ ಸಾಂಬಾರ್ ಸೇರಿಸಿಕೊಂಡು ಇನ್ನೇನು ಬಾಯಿಗೆ ಹಾಕಬೇಕು ಎನ್ನುವಷ್ಟರಲ್ಲಿ ಇಡ್ಲಿಯಲ್ಲಿ ಏನೋ ಕಪ್ಪು ಪದಾರ್ಥ ಕಂಡಿದೆ. ಅರೇ ಇನೇನು ಎಂದು ನೋಡುತ್ತಿದ್ದಂತೆ ಅದು ಜಿರಲೆ ಅನ್ನೋದು ಗೊತ್ತಾಗಿದೆ.
ಕೂಡಲೇ ಸಿಟ್ಟಿಗೆದ್ದ ಗ್ರಾಹಕ ಹೊಟೇಲ್ ನಡೆಸುತ್ತಿದ್ದ ಗೋಪಾಲ್ ಎಂಬುವವರನ್ನು ಕರೆದು ಇಡ್ಲಿಯಲ್ಲಿ ಜಿರಲೆ ಸಿಕ್ಕಿದ್ದನ್ನ ತೋರಿಸಿದ್ದಾರೆ. ಆದರೆ ಇದಕ್ಕೆ ಹೊಟೇಲ್ ಸಿಬ್ಬಂದಿ ಉಡಾಫೆಯ ಮಾತುಗಳನ್ನಾಡಿದ್ದು, ಸಿಟ್ಟಿಗೆದ್ದ ಗ್ರಾಹಕ ಬೇರೆಯವರಿಗೆ ಈ ರೀತಿ ತೊಂದರೆಯಾಗದಿರಲಿ ಎಂದು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.