ಹೊಸಪೇಟೆ(ವಿಜಯನಗರ): ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಹೊಸಪೇಟೆ ಉಪ ಕಾರಾಗೃಹ ಮತ್ತು ವಿಜಯನಗರ ಶಿಳ್ಳೆಖ್ಯಾತರ ಕ್ಷೇಮಾಭಿವೃದ್ದಿ ಸಂಘ ಸಂಯುಕ್ತಾಶ್ರಯದಲ್ಲಿ ಹೊಸಪೇಟೆ ಕಾರಾಗೃಹದ ಬಂಧಿಗಳಿಗೆ ಚಿತ್ರಕಲೆ ಮತ್ತು ಒಳಾಂಗಣ ಕ್ರೀಡೆಗಳ ಸ್ಪರ್ಧೆ ಹೊಸಪೇಟೆ ಉಪ ಕಾರಾಗೃಹದಲ್ಲಿ ಭಾನುವಾರದಂದು ಹಮ್ಮಿಕೊಳ್ಳಲಾಗಿತ್ತು.
ಹೊಸಪೇಟೆ ಉಪ ಕಾರಾಗೃಹದ ಅಧೀಕ್ಷಕರಾದ ಎಂ.ಹೆಚ್.ಕಲಾದಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿಜಯನಗರ ಶಿಳ್ಳೆಖ್ಯಾತರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಸಿದ್ದು ಬೆಳಗಲ್ ಹಾಗೂ ಪ್ರಧಾನ ಕಾರ್ಯದರ್ಶಿ ಸುರೇಂದ್ರ, ಗೃಹರಕ್ಷಕ ದಳದ ಸಮಾದೇಷ್ಟರಾದ ಎಸ್.ಎಂ.ಗಿರೀಶ್ ಮತ್ತು ಲೇಖಕಿ ಅಂಜಲಿ ಬೆಳಗಲ್ ಇವರುಗಳು ಆಗಮಿಸಿದ್ದರು.
ಇನ್ನು, ಈ ಕಾರ್ಯಕ್ರಮದಲ್ಲಿ ಮುಖ್ಯವೀಕ್ಷಕಿ ಭುವನೇಶ್ವರಿ, ಪ್ರಭಾರಿ ಸಹಾಯಕ ಜೈಲರ್ ಕೆ.ಭೀಮಪ್ಪ, ವೀಕ್ಷಕರಾದ ಸುರೇಶ್ ಕ್ಯಾದಿಗುಪ್ಪಿ ಮತ್ತು ಸಂತೋಷ ಸಂತಾಗೋಳ, ರೂಪ ಎಫ್.ಕೆ ಸೇರಿದಂತೆ ಕಾರಾಗೃಹದ ಸಿಬ್ಬಂದಿಗಳು ಇದ್ದರು.