ಬಳ್ಳಾರಿ/ವಿಜಯನಗರ: ಬಿಪಿಎಲ್ ಕುಟುಂಬಗಳಿಗೆ 75 ಯೂನಿಟ್ ಉಚಿತ ವಿದ್ಯುತ್ ಸೌಲಭ್ಯ; ಅರ್ಹತೆಗಳೇನು? ಅರ್ಜಿ ಸಲ್ಲಿಸುವುದು ಹೇಗೆ..?

ಬಳ್ಳಾರಿ/ವಿಜಯನಗರ: ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಎಲ್ಲಾ ಬಡತನ ರೇಖೆಗಿಂತ ಕೆಳಗಿರುವ (ಬಿ.ಪಿ.ಎಲ್) ಕುಟುಂಬಗಳ ಗೃಹ ಬಳಕೆಯ ಮಾಸಿಕ 75 ಯೂನಿಟ್‍ಗಳವರೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡುವುದಾಗಿ ಸರ್ಕಾರ ಆದೇಶ ಹೊರಡಿಸಿರುತ್ತದೆ.…

electricity-bill-vijayaprabha-news

ಬಳ್ಳಾರಿ/ವಿಜಯನಗರ: ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಎಲ್ಲಾ ಬಡತನ ರೇಖೆಗಿಂತ ಕೆಳಗಿರುವ (ಬಿ.ಪಿ.ಎಲ್) ಕುಟುಂಬಗಳ ಗೃಹ ಬಳಕೆಯ ಮಾಸಿಕ 75 ಯೂನಿಟ್‍ಗಳವರೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡುವುದಾಗಿ ಸರ್ಕಾರ ಆದೇಶ ಹೊರಡಿಸಿರುತ್ತದೆ. ಅರ್ಹ ಗ್ರಾಹಕರು ಈ ಕೆಳಕಂಡ ಷರತ್ತು/ನಿಬಂಧನೆಗಳಿಗೊಳಪಟ್ಟು ಯೋಜನೆಯ ಸೌಲಭ್ಯವನ್ನು ಪಡೆಯಬಹುದು ಎಂದು ಬಳ್ಳಾರಿ ಜೆಸ್ಕಾಂನ ಕಾರ್ಯ ಮತ್ತು ಪಾಲನಾ ವೃತ್ತದ ಅಧೀಕ್ಷಕ ಅಭಿಯಂತರರು (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಹತೆ: ಗ್ರಾಹಕರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಾಗಿರಬೇಕು. ಜಾತಿ ಪ್ರಮಾಣ ಪತ್ರ (RD ಸಂಖ್ಯೆ ಸಹಿತ) ಹೊಂದಿರಬೇಕು. ಬಿ.ಪಿ.ಎಲ್. ರೇಷನ್ ಕಾರ್ಡ್(RC ಸಂಖ್ಯೆ ಸಹಿತ) ಹೊಂದಿರಬೇಕು. ಆಧಾರ್ ಕಾರ್ಡ್ ಹೊಂದಿದ್ದು, ಕಡ್ಡಾಯವಾಗಿ ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಯಾಗಿರಬೇಕು.

ಷರತ್ತು/ನಿಬಂಧನೆಗಳು : ಅರ್ಹ ಗ್ರಾಹಕರಗೆ ವಿದ್ಯುತ್ ಸ್ಥಾವರಗಳಿಗೆ ಕಡ್ಡಾಯವಾಗಿ ಮಾಪಕವನ್ನು ಅಳವಡಿಸಲಾಗುವುದು ಹಾಗೂ ಪ್ರತಿ ತಿಂಗಳು ಮಾಪಕ ಓದುವುದು ಕಡ್ಡಾಯವಾಗಿರುತ್ತದೆ. ಈ ಸೌಲಭ್ಯಕ್ಕೆ ಅರ್ಹರಾಗುವ ಗ್ರಾಹಕರುಗಳು ಮಾಸಿಕ ವಿದ್ಯುತ್ ಬಿಲ್ಲನ್ನು ನಿಗದಿತ ಅವಧಿಯೊಳಗೆ ಸಂಪೂರ್ಣವಾಗಿ ಪಾವತಿಸುವುದು. ಅರ್ಹ ವಿದ್ಯುತ್ ಗ್ರಾಹಕರುಗಳು ಏ.30ರ ಅಂತ್ಯಕ್ಕೆ ಇರುವ ಬಾಕಿ ವಿದ್ಯುತ್ ಶುಲ್ಕದ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸತಕ್ಕದು. ಮಾಸಿಕ ಬಳಕೆಯು 250 ಯೂನಿಟ್‍ಗಳಿಗಿಂತ ಹೆಚ್ಚಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗಿರುವುದಿಲ್ಲ. ಬಡತನ ರೇಖೆಗಿಂತ ಕೆಳಗಿನ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಕುಟುಂಬಕ್ಕೆ ಮಾಸಿಕ/75 ಯೂನಿಟ್ ಉಚಿತ ವಿದ್ಯುತ್ ಯೋಜನೆಯ ಲಾಭ ಪಡೆಯಲು ಅರ್ಹ ಫಲಾನುಭವಿಗಳು ಕರ್ನಾಟಕ ಸರ್ಕಾರದ ಕಲ್ಯಾಣ ಯೋಜನೆಗಳು ಮತ್ತು ಆರಂಭದಿಂದ ಅಂತ್ಯದವರೆಗಿನ ಸೇವೆಗಳಿಗಾಗಿರುವ “ಸುವಿಧಾ”ಚಿ(End-End Services Portal) suvidha.karanataka.gov.in ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯಗೊಳಿಸಲಾಗಿದೆ.

Vijayaprabha Mobile App free

ಅರ್ಜಿ ಸಲ್ಲಿಸುವ ವಿಧಾನ:

suvidha.karanataka.gov.in ಭೇಟಿ ನೀಡಿ “ಇತರೆ” ಯೋಜನೆಗಳಡಿಯ 75 ಯೂನಿಟ್ ಉಚಿತ ವಿದ್ಯುತ್” ಯೋಜನೆಯನ್ನು ಆಯ್ಕೆ ಮಾಡಿ ಕರ್ನಾಟಕ ನಿವಾಸಿ ಎಂಬುದನ್ನು ಖಚಿತ ಪಡಿಸಿ ಲಿಂಗವನ್ನು ನಮೂದಿಸಿ ಮುಂದುವರೆಯಿರಿ.

ವಯಸ್ಸಿನ ಗುಂಪನ್ನು ಆಯ್ಕೆ ಮಾಡಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿರುವುದು. ಬಡತನ ರೇಖೆಗಿಂತ ಕೆಳಗಿರುವುದರ ಕುರಿತು ಸೂಕ್ತ ಆಯ್ಕೆ ಮಾಡಿ, ನಿಮ್ಮ ಆಧಾರ ಸಂಖ್ಯೆಗೆ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆ ನಮೂದಿಸಿ ಅದಕ್ಕೆ ಬರುವ BPLಸಲ್ಲಿಸಿರಿ.

ನಿಮ್ಮ ಆಧಾರ್ ಸಂಖ್ಯೆ, ನಿಮ್ಮ ಆಧಾರ ಸಂಖ್ಯೆಗೆ ಲಿಂಕ್ ಮಾಡಿದ ಮೊಬೈಲ್, ಬಾಡಿಗೆ ಒಪ್ಪಂದ, ಪ್ರಮಾಣ ಪತ್ರ, ಅರ್ಜಿದಾರರ ಪಾಸ್ ಪೋರ್ಟ್ ಅಳತೆಯ ಭಾವ ಚಿತ್ರದಂತಹ ಅವಶ್ಯ ದಾಖಲಾತಿಗಳನ್ನು ಜೊತೆಗಿರಿಸಿಕೊಂಡು ಅರ್ಜಿ ಸಲ್ಲಿಸುವುದನ್ನು ಮುಂದುವರೆಸಿ.

ಅರ್ಜಿದಾರರ ತಾಲ್ಲೂಕು, ಆರ್ಥಿಕ ಸ್ಥಿತಿಗತಿ, ಜಾತಿ ಪ್ರಮಾಣ ಪತ್ರದ ಆರ್ ಡಿ ಸಂಖ್ಯೆ, ಪಡಿತರ ಕಾರ್ಡ್‍ನಲ್ಲಿರುವಂತೆ ಕುಟುಂಬದ ಸದಸ್ಯರು ವಿವರ, ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ವಿದ್ಯುತ್ ಸಂಪರ್ಕ ಐಡಿ (GESCOM Electricity Connection ID), ಬಿಲ್ಲಿನಲ್ಲಿರುವ ಗ್ರಾಹಕರ ಹೆಸರು, ಹಿಂದಿನ ತಿಂಗಳಿನ ಬಿಲ್ಲಿನ ಸ್ಥಿತಿಗತಿ, ವಿದ್ಯುತ್ ಸಂಪರ್ಕ ನಿಮ್ಮ ಹೆಸರಿನಲ್ಲಿದೆಯೇ ಎಂಬುದನ್ನು ಖಚಿತ ಪಡಿಸಿ ಮುಂದುವರೆಯಿರಿ.

ತದನಂತ ಎಲ್ಲಾ ವಿವರಗಳನ್ನು ಸರಿಯಾಗಿರುವುದನ್ನು ಮತ್ತೊಮ್ಮೆ ಖಚಿತ ಪಡಿಸಿ ಮುಂದೆ ಆಧಾರ ಸಂಖ್ಯೆಗೆ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ ವಿವರಗಳನ್ನು (e-sign) ಮಾಡಿ ಸಲ್ಲಿಸಿರಿ. ಪೂರ್ಣಗೊಂಡ ಅರ್ಜಿಯನ್ನು ವೀಕ್ಷಿಸಬುಹುದು ಮತ್ತು ಡೌನ್ ಲೋಡ್ ಕೂಡ ಮಾಡಿಕೊಳ್ಳಬಹುದು.

ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ನಂಬರ್ ಬಂದಿರುವ ಓಟಿಪಿ ನಂಬರ್‍ನ್ನು ನಮೂಸಿಸುವುದು ಕಡ್ಡಾಯವಾಗಿರುವುದುರಿಂದ ಈಗಾಗಲೇ ಅರ್ಹ ಗ್ರಾಹಕರು ಉಪ-ವಿಭಾಗದಲ್ಲಿ ಅರ್ಜಿ ನೀಡಿದ್ದಲ್ಲಿ ಸದರಿ ಗ್ರಾಹಕರು ಇನ್ನೊಮೆ ಅನ್‍ಲೈನ್ ಮುಖಾಂತರವೇ ಅರ್ಜಿ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.