ಹರಪನಹಳ್ಳಿ: ತಾಲೂಕಿನ ಅರಸಿಕೆರೆ ಗ್ರಾಮದಲ್ಲಿ ವಿವಿಧ ಭಾಗಗಳಲ್ಲಿ 73 ನೇ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಜಿ. ವಿ. ವಿ. ಡಿ. ಎಸ್ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ. ಎಂ. ಸುರೇಶ ಮಾತನಾಡಿ ಗಣರಾಜ್ಯೋತ್ಸವ ಆಚರಣೆ ನಮ್ಮ ಹೆಮ್ಮೆ, ಈ ದಿನ ನಾವು ನಮ್ಮ ಸಂವಿಧಾನವನ್ನು ನಮಗೆ ಅರ್ಪಣೆ ಮಾಡಿಕೊಂಡ ದಿನ. ಗಣ ಎಂದರೆ ಜನಗಳ ಗುಂಪು ಅಂದರೆ ಅಧಿಕಾರವನ್ನು ಜನರ ಗುಂಪಿಗೆ ಕೊಡುಗೆ ಎಂದು ಜನವರಿ 26 ತಿಳಿಸುತ್ತದೆ ಎಡನು ಹೇಳಿದರು.
1950 ರಲ್ಲಿ ಗಣರಾಜ್ಯವನ್ನು ಜಾರಿಗೆ ತರಲಾಗಿದ್ದು, ಈ ಸಂವಿಧಾನದಲ್ಲಿ ಸಮಾನತೆ , ಪ್ರತಿಯೊಬ್ಬರಿಗೂ ಸಹಬಾಳ್ವೆ , ಸಾಮಾಜಿಕ ಆರ್ಥಿಕ , ರಾಜಕೀಯ ಹಕ್ಕುಗಳನ್ನು ಸಮಾನವಾಗಿ ಒದಗಿಸುತ್ತದೆ. ಸಮಾಜದಲ್ಲಿದ್ದ ಲಿಂಗ ತಾರತಮ್ಯ , ತಾರತಮ್ಯ , ಪ್ರಾದೇಶಿಕ ತಾರತಮ್ಯ ಅಸಮಾನತೆ , ಜಾತಿ ಹೋಗಲಾಡಿಸಿಬೇಕು ಎಂದು ಹೇಳಿದರು.