ಸಂಡೂರು: 3 ಲಕ್ಷ ರೂ. ಮೌಲ್ಯದ 32 ಕೆಜಿ ಗಾಂಜಾ ವಶ

ಬಳ್ಳಾರಿ,ಅ.13: ಜಿಲ್ಲೆಯ ಸಂಡೂರು ತಾಲೂಕಿನ ಸುಶೀಲಾನಗರದ ಹೊರವಲಯದ ಹೊಲದಲ್ಲಿ ಬೆಳೆಯಲಾಗಿದ್ದ ಗಾಂಜಾ ಬೆಳೆಯ ಮೇಲೆ ಇಂದು ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ 3ಲಕ್ಷ ರೂ.ಮೌಲ್ಯದ 32ಕೆಜಿ (142 ಗಾಂಜಾ ಗೀಡಗಳು) ಗಾಂಜಾ ವಶಪಡಿಸಿಕೊಂಡಿದ್ದಾರೆ.…

marijuana worth vijayaprabha

ಬಳ್ಳಾರಿ,ಅ.13: ಜಿಲ್ಲೆಯ ಸಂಡೂರು ತಾಲೂಕಿನ ಸುಶೀಲಾನಗರದ ಹೊರವಲಯದ ಹೊಲದಲ್ಲಿ ಬೆಳೆಯಲಾಗಿದ್ದ ಗಾಂಜಾ ಬೆಳೆಯ ಮೇಲೆ ಇಂದು ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ 3ಲಕ್ಷ ರೂ.ಮೌಲ್ಯದ 32ಕೆಜಿ (142 ಗಾಂಜಾ ಗೀಡಗಳು) ಗಾಂಜಾ ವಶಪಡಿಸಿಕೊಂಡಿದ್ದಾರೆ. ಆರೋಪಿಯಾದ ಹೊಲದ ಮಾಲೀಕ ನಾಪತ್ತೆಯಾಗಿದ್ದು, ಅವನ ಪತ್ತೆಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಅಬಕಾರಿ ಅಧಿಕಾರಿ ಸಯೀದಾ ಅಫ್ರೀನ್, ಡಿವೈಎಸ್ಪಿ ಬಸಪ್ಪ ಪೂಜಾರ್ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಗಳಾದ ಶಂಕರ್ ದೊಡ್ಡಮನಿ, ವಿಜಯಕುಮಾರ್ ಸೆಲವಡೆ, ಜ್ಯೋತಿಬಾಯಿ, ತುಕಾರಾಂ, ಆಂಜನೇಯ ಸೇರಿದಂತೆ ಅಬಕಾರಿ ಇಲಾಖೆಯ ಸಿಬ್ಬಂದಿ ಸೇರಿ ಇಂದು ದಿಢೀರ್ ದಾಳಿ ನಡೆಸಿ 8ಅಡಿ ಎತ್ತರಕ್ಕೆ ಬೆಳೆದು ನಿಂತಿದ್ದ 142 ಗಾಂಜಾ ಗೀಡಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಸಂಡೂರು ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.