‘ಹಿಜಾಬ್ ಹಾಕುವುದು ಅವರ ರೈಟ್ಸ್’; ಹಿಜಾಬ್ ಧರಿಸದಿದ್ದರೆ ರೇಪ್…!: ಜಮೀರ್ ಅಹ್ಮದ್

ಹುಬ್ಬಳ್ಳಿ: ಹಿಜಾಬ್ ಹಾಕುವುದು ಅವರ ರೈಟ್ಸ್, ನೂರಾರು ವರ್ಷದಿಂದ ಹಾಕಿಕೊಂಡು ಬರುತ್ತಿದ್ದು, ಹಿಜಾಬ್ ಬಳಸದಿದ್ದಲ್ಲಿ ಸಮುದಾಯದ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಾರೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಚಿವ…

ಹುಬ್ಬಳ್ಳಿ: ಹಿಜಾಬ್ ಹಾಕುವುದು ಅವರ ರೈಟ್ಸ್, ನೂರಾರು ವರ್ಷದಿಂದ ಹಾಕಿಕೊಂಡು ಬರುತ್ತಿದ್ದು, ಹಿಜಾಬ್ ಬಳಸದಿದ್ದಲ್ಲಿ ಸಮುದಾಯದ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಾರೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಚಿವ ಜಮೀರ್ ಅಹ್ಮದ್ ಅವರು, ‘ಹಿಜಾಬ್ ವಿವಾದ ಕೋರ್ಟ್​​ನಲ್ಲಿ, ವಿಚಾರಣೆ ನಡೆಯುತ್ತಿದೆ ಕಾದು ನೋಡೋಣ. ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನವೇ ಹಿಜಾಬ್ ಹಾಕಿಕೊಂಡು ಬರುತ್ತಿದ್ದಾರೆ. ಇವರು ಮಕ್ಕಳಲ್ಲಿ ಜಾತಿ ಬೀಜ ಬಿತ್ತಿ ರಾಜಕೀಯ ಮಾಡುತ್ತಿದ್ದಾರೆ. ನ್ಯಾಯಾಲಯದ ಆದೇಶ ನೂರಕ್ಕೆ ನೂರು ನಮ್ಮ ಪರ ಬರುತ್ತೆ ಅನ್ನೋ ನಂಬಿಕೆ ಇದೆ’ ಎಂದು ಹೇಳಿದ್ದಾರೆ.

ಹಿಜಾಬ್ ಧರಿಸದಿದ್ದರೆ ರೇಪ್…: 

Vijayaprabha Mobile App free

ಇನ್ನು, ಹಿಜಾಬ್ ಎಂದರೆ ಇಸ್ಲಾಮ್ ನಲ್ಲಿ ಪರದೆ ಎಂದರ್ಥ. ಅದನ್ನು ಮುಸ್ಲಿಂ ಮಹಿಳೆಯರು ತಮ್ಮ ಸೌಂದರ್ಯವನ್ನು ಬಚ್ಚಿಡಲು ಬಳಸುತ್ತಾರೆ. ಹಿಜಾಬ್ ಬಳಸದಿದ್ದಲ್ಲಿ ಸಮುದಾಯದ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಾರೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು ಹುಬ್ಬಳ್ಳಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ನಮಗೆ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದು, ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.