ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಸಚಿವ ಸಂಪುಟದಲ್ಲಿ ದಕ್ಷ ಆಡಳಿತಗಾರರು ಇದ್ದಾರೆ. ಸೇವಾ ಮನೋಭಾವನೆಯಿರುವ ಯುವಕರು ನಮ್ಮ ಪಕ್ಷದಲ್ಲಿದ್ದಾರೆ ಎಂದು ಹೇಳಿದರು.
ಇನ್ನು, ರೈತ ವಿದ್ಯಾ ನಿಧಿಯನ್ನು ದೇಶದಲ್ಲಿಯೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ತಂದಿದ್ದು, ಹೊಸ ಯೋಜನೆಗಳನ್ನು ಘೋಷಣೆ ಮಾಡಬೇಕೆಂದು ತೀರ್ಮಾನಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಹೀಗಾದ್ರೆ ಯೋಗಿ ಮಾಡೆಲ್ ಸರ್ಕಾರ:
ಇನ್ನು, ಕೋಮು ಭಾವನೆ ಕೆರಳಿಸುವ ಶಕ್ತಿಗಳನ್ನು ಸದೆಬಡಿಯುವ ಕೆಲಸಗಳು ನಡೆಯುತ್ತಿದ್ದು, ಕೇವಲ ಬಾಯಿ ಮಾತಲ್ಲಿ ಮಾತ್ರವಲ್ಲ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ರಾಜ್ಯದಲ್ಲಿ ಇಂತಹ ಕುಕೃತ್ಯ ಮಾಡುವವರನ್ನು ನಿಯಂತ್ರಿಸಲು ಅನಿವಾರ್ಯವಾದರೆ UP ಮಾದರಿಯ ನಿಯಮ ತರಲು ಸರ್ಕಾರ ಹಿಂಜರಿಯುವುದಿಲ್ಲ ಎಂದು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ CM ಬೊಮ್ಮಾಯಿ ಹೇಳಿದ್ದಾರೆ. ಹರ್ಷನ ಕೊಲೆ ವಿಚಾರದಲ್ಲೂ ಸರ್ಕಾರ 24 ಗಂಟೆಗಳಲ್ಲಿ ಕ್ರಮ ಕೈಗೊಂಡಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.