ಭೂಸುಧಾರಣಾ ತಿದ್ದುಪಡಿ; ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ರಾಜ್ಯಸರ್ಕಾರ ಬದ್ಧ : ಯಡಿಯೂರಪ್ಪ

ಬೆಂಗಳೂರು: ರೈತ ವಿರೋಧಿ ಕೃಷಿ ಮಸೂದೆ, ಭೂಸುಧಾರಣೆಗಳ ತಿದ್ದುಪಡಿ ಮಾಡಲು ಅಂಗೀಕರಿಸಿರುವ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ಕೂಡಲೇ ಈ ಮಸೂದೆಗಳನ್ನು ಹಿಂಪಡೆಯುವಂತೆ ಕನ್ನಡ ಪರ ಸಂಘಟನೆಗಳು, ವಿರೋಧ ಪಕ್ಷಗಳು, ರೈತ ಸಂಘಟನೆಗಳು…

b s yediyurappa vijayaprabha

ಬೆಂಗಳೂರು: ರೈತ ವಿರೋಧಿ ಕೃಷಿ ಮಸೂದೆ, ಭೂಸುಧಾರಣೆಗಳ ತಿದ್ದುಪಡಿ ಮಾಡಲು ಅಂಗೀಕರಿಸಿರುವ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ಕೂಡಲೇ ಈ ಮಸೂದೆಗಳನ್ನು ಹಿಂಪಡೆಯುವಂತೆ ಕನ್ನಡ ಪರ ಸಂಘಟನೆಗಳು, ವಿರೋಧ ಪಕ್ಷಗಳು, ರೈತ ಸಂಘಟನೆಗಳು ಆಗ್ರಹಿಸಿ ಬಂದ್ ಗೆ ಸೂಚನೆ ನೀಡಿವೆ.

ರೈತ ವಿರೋಧಿ ಕೃಷಿ ಮಸೂದೆ, ಭೂಸುಧಾರಣೆಗಳ ತಿದ್ದುಪಡಿ ವಿಷಯಕ್ಕೆ ಸಂಬಂಸಿದಂತೆ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದೂ, ಕರ್ನಾಟಕ ಭೂಸುಧಾರಣೆಗಳ ತಿದ್ದುಪಡಿ ವಿಧೇಯಕವು ಇಂದು ವಿಧಾನಸಭೆಯಲ್ಲಿ ಚರ್ಚೆ ನಂತರ ಅಂಗೀಕೃತಗೊಂಡಿದೆ. ಭೂ ಸುಧಾರಣಾ ಕಾಯ್ದೆಯಿಂದ ಯಾವುದೇ ಕೃಷಿಕರಿಗೆ ಯಾವ ರೀತಿಯ ಸಮಸ್ಯೆಯೂ ಉಂಟಾಗುವುದಿಲ್ಲ, ರೈತರು ಆತಂಕ ಪಡುವ ಅಗತ್ಯವಿಲ್ಲ. ಈ ವಿಚಾರದಲ್ಲಿ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ರಾಜ್ಯಸರ್ಕಾರ ಬದ್ಧವಾಗಿದೆ.

ಪ್ರಸಕ್ತ ಭೂಸುಧಾರಣಾ ತಿದ್ದುಪಡಿ ಮಸೂದೆಯು ಕರ್ನಾಟಕದ ರೈತರ ಪಾಲಿಗೆ ಆಶಾದಾಯಕ ಮಸೂದೆಯಾಗಿದೆ. ಇದು ಸುಧಾರಣಾ ಪರವಾಗಿ, ಕಾಲಕ್ಕನುಗುಣವಾಗಿದ್ದು, ರೈತರ ಹಿತದೃಷ್ಟಿಯನ್ನೇ ಆದ್ಯತೆಯನ್ನಾಗಿಸಿಕೊಂಡಿದೆ. ರೈತರ ಅನಾನುಕೂಲಗಳನ್ನು ಪರಿಹರಿಸಿ, ತಂತ್ರಜ್ಞಾನದ ನೆರವು, ಉತ್ತಮ ಸೌಕರ್ಯಗಳ ಅನುಕೂಲತೆ ಒದಗಿಸುವ ಉದ್ದೇಶ ಹೊಂದಿದೆ ಎಂದು ಹೇಳಿದ್ದಾರೆ.

Vijayaprabha Mobile App free

ಇದನ್ನು ಓದಿ: ತಿರುಪತಿಯಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಸಿಎಂ ಯಡಿಯೂರಪ್ಪ ಶಂಕುಸ್ಥಾಪನೆ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.