ಬೆಂಗಳೂರು : ವಿವಾದಾತ್ಮಕ ಹೇಳಿಕೆಯಿಂದಲೇ ಯಾವಾಗಲು ಸುದ್ದಿಯಲ್ಲಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕ ಯತ್ನಾಳ್ ಅವರು ರಾಜ್ಯ ರಾಜಕಾರಣದಲ್ಲಿ ಬಾರಿ ಬದಲಾವಣೆಯಾಗುತ್ತದೆ ಎಂದು ಬಾಂಬ್ ಸಿಡಿಸಿದ್ದು, ಆಗ ನನ್ನ ಪಾತ್ರ ಏನೆಂಬುದು ಗೊತ್ತಾಗುತ್ತದೆ ಎಂದು ಹೇಳಿದ್ದು, ಮುಂದೇನಾಗುತ್ತೋ ಕಾದು ನೋಡಿ ಎಂದು ಹೇಳಿಕೆ ನೀಡಿದ್ದಾರೆ.
ಇನ್ನು ನಟಿ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮತ್ತು ಬಿಜೆಪಿ, ಆರ್ ಎಸ್ ಎಸ್ ಮುಖಂಡರ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತನಾಗಿರುವ ಯುವರಾಜ್ ಅಲಿಯಾಸ್ ಸ್ವಾಮಿ ಅವರ ಬಗ್ಗೆ ಮಾತನಾಡಿದ ಯತ್ನಾಳ್, ನನಗೆ ಯುವರಾಜ್ ಅಲಿಯಾಸ್ ಸ್ವಾಮಿ ಅವರ ಪರಿಚಯ ಇಲ್ಲ. ಬಹಳ ಜನ ಬೆಂಗಳೂರು, ದೆಹಲಿಯಲ್ಲಿ ಯುವರಾಜ್ ಅವರ ಹಾಗೆ ಕೆಲಸ ಮಾಡುವ ಎಜೇಂಟ್ ಗಳು ಇದ್ದಾರೆ.
ಇನ್ನು ಡ್ರಗ್ಸ್ ಕೇಸ್ ಹಾಗು ಪರಿಷತ್ ನಲ್ಲಿ ನಡೆದ ಗಲಾಟೆ ನಂತೆಯೇ ಈ ಕೇಸನ್ನು ಸಹ ಮುಚ್ಚಲಾಗುತ್ತದೆ ಎಂದು ಸರ್ಕಾರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಿಡಿಕಾರಿದ್ದಾರೆ.