ಕಲಬುರಗಿ:- ಜಿಲ್ಲೆಯ ಸೇಡಂನ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ ವಿರುದ್ಧ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದು, ನನ್ನ ಹೊಟ್ಟೆಯಲ್ಲಿ ಹುಟ್ಟಿರುವ ಮಗುವಿಗೆ ಶಾಸಕರೇ ತಂದೆ ಎಂದು ಬಾಂಬ್ ಸಿಡಿಸಿದ್ದಾರೆ.
ಈ ಸಂಬಂಧ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಶಾಸಕರು ನನ್ನ ಮಗುವಿಗೆ ಅವರೇ ತಂದೆ ಎಂದು ಒಪ್ಪಿಕೊಳ್ಳಬೇಕು ಮತ್ತು ಜೀವನಾಂಶ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಆರೋಪಿ ಅಲ್ಲಗಳೆದ ಶಾಸಕ :
ಇನ್ನು, ಮಹಿಳೆಯ ಆರೋಪವನ್ನು ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ ತಿರಸ್ಕರಿಸಿದ್ದು, ಆಕೆ ನನ್ನ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಳು. ಹಣ ಕೊಡದಿರುವ ಹಿನ್ನೆಲೆ ಈ ರೀತಿಯ ಆರೋಪ ಮಾಡುತ್ತಿದ್ದು, ಮಹಿಳೆಯ ವಿರುದ್ಧ ಬೆಂಗಳೂರಿನ ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ.
ಇನ್ನು, “ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ ಒಬ್ಬ ದೊಡ್ಡ ಫ್ರಾಡ್, ನನ್ನ ಮಗನಿಗೂ, ಸೇಡಂ ಶಾಸಕನಿಗೂ ತಂದೆ-ಮಗನ ಸಂಬಂಧವಿದೆ” ಎಂದು ಮಹಿಳೆ ಹೇಳಿಕೆ ನೀಡಿದ್ದು, “ನನ್ನ ಮಗನಿಗೆ 14 ವರ್ಷ, ಆತ ತನ್ನದೇ ಮಗ ಅಂತ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ ಒಪ್ಪಿಕೊಳ್ಳಲಿ” ಎಂದು ಮಹಿಳೆ ಆಗ್ರಹಿಸಿದ್ದರು.
ಸಂತ್ರಸ್ತ ಮಹಿಳೆ ವಿರುದ್ಧ ಎಫ್ ಐ ಆರ್ :-
ಇನ್ನು, ಸಂತ್ರಸ್ತ ಮಹಿಳೆಯ ವಿರುದ್ಧ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ ದೂರು ನೀಡಿದ್ದು, ಇದರ ಆದರದ ಮೇಲೆ ಸಂತ್ರಸ್ತ ಮಹಿಳೆ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಈ ನಡುವೆ ಶಾಸಕರ ಕಡೆಯವರಿಂದ ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದು,ಇದರಲ್ಲಿ ಯಾರ ಆರೋಪ ನಿಜ ಎಂಬುವುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.