ಸರ್ಕಾರಿ, ಖಾಸಗಿ ಹಾಗೂ ಇತರೆ ಸಣ್ಣಪುಟ್ಟ ಕೆಲಸಗಳಿಗೂ ಆಧಾರ್ ಅತ್ಯಗತ್ಯವಾಗಿದ್ದು, ಆಧಾರ್ ಕಾರ್ಡ್ ಇಲ್ಲದೆ ಅನೇಕ ಸರ್ಕಾರಿ ಯೋಜನೆಗಳು ಲಭ್ಯವಿಲ್ಲ. ಮೇಲಾಗಿ ಸರ್ಕಾರದ ಇತರೆ ಸವಲತ್ತುಗಳು ಸಿಗುತ್ತಿಲ್ಲ ಎಂಬುದನ್ನು ಗಮನಿಸಬೇಕಾಗಿದ್ದು, ಸರ್ಕಾರದ ಯೋಜನೆಗಳು ಮತ್ತು ಸಬ್ಸಿಡಿಗಳ ಪ್ರಯೋಜನಗಳನ್ನು ಪಡೆಯಲು ಆಧಾರ್ ಕಡ್ಡಾಯವಾಗಿದೆ ಎಂದು UIDAI ಸ್ಪಷ್ಟಪಡಿಸಿದೆ.
ಇದಕ್ಕಾಗಿ ಪ್ರಾಧಿಕಾರವು ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಿಗೆ ಸುತ್ತೋಲೆಯನ್ನು ಸಹ ಹೊರಡಿಸಿದ್ದು, ಆಧಾರ್ ಹೊಂದಿರುವ ನಾಗರಿಕರು ಮಾತ್ರ ಯೋಜನೆಗಳು ಮತ್ತು ಸಬ್ಸಿಡಿಗಳ ಪ್ರಯೋಜನ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರಗಳು ಮತ್ತು ಸಚಿವಾಲಯಗಳಿಗೆ ಸುತ್ತೋಲೆ ಕಳುಹಿಸಿದೆ.
ಹೀಗಾಗಿ ಆಧಾರ್ ಹೊಂದಿರುವ ನಾಗರಿಕರು ಮಾತ್ರ ಯೋಜನೆಗಳು ಮತ್ತು ಸಬ್ಸಿಡಿಗಳ ಪ್ರಯೋಜನ ಪಡೆದುಕೊಳ್ಳಲಿದ್ದು, ಆಧಾರ್ ಇಲ್ಲದವರಿಗೆ ಯಾವುದೇ ಪ್ರಯೋಜನಗಳನ್ನು ನೀಡುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.