ಏನಿದು ಬಾಡಿಗೆ ತಾಯ್ತನ..? ಬಾಡಿಗೆ ತಾಯ್ತನದಿಂದ ಯಾರೆಲ್ಲಾ ಮಗುವನ್ನು ಪಡೆಯಬಹುದು? ಸರ್ಕಾರದ ಷರತ್ತುಗಳೇನು..?

ಬಾಡಿಗೆ ತಾಯ್ತನ ಎಂದರೆ ಮಹಿಳೆ ತನ್ನದಲ್ಲದ ಭ್ರೂಣವನ್ನು ತನ್ನ ಗರ್ಭದಲ್ಲಿ ಪೂರ್ಣಾವಧಿಗೆ ಇಟ್ಟುಕೊಂಡು, ಪೊರೆದು ಹೆತ್ತು ಕೊಡುವುದು. ಈ ಕೆಲಸಕ್ಕಾಗಿ ಮಹಿಳೆ ಹಣ ಪಡೆಯುವುದರಿಂದ ಇದು ‘ಬಾಡಿಗೆ ತಾಯ್ತನ’ ಎಂದು ಕರೆಯಲಾಗುತ್ತದೆ. ಒಂದಲ್ಲ ಒಂದು…

surrogacy vijayaprabha news

ಬಾಡಿಗೆ ತಾಯ್ತನ ಎಂದರೆ ಮಹಿಳೆ ತನ್ನದಲ್ಲದ ಭ್ರೂಣವನ್ನು ತನ್ನ ಗರ್ಭದಲ್ಲಿ ಪೂರ್ಣಾವಧಿಗೆ ಇಟ್ಟುಕೊಂಡು, ಪೊರೆದು ಹೆತ್ತು ಕೊಡುವುದು. ಈ ಕೆಲಸಕ್ಕಾಗಿ ಮಹಿಳೆ ಹಣ ಪಡೆಯುವುದರಿಂದ ಇದು ‘ಬಾಡಿಗೆ ತಾಯ್ತನ’ ಎಂದು ಕರೆಯಲಾಗುತ್ತದೆ.

ಒಂದಲ್ಲ ಒಂದು ಕಾರಣಕ್ಕಾಗಿ ಮಗುವನ್ನು ಪಡೆಯಲು ಅಶಕ್ತರಾದ ದಂಪತಿ, ತಮ್ಮದೇ ಮಗುವನ್ನು ಪಡೆಯಲು ಈ ಬಾಡಿಗೆ ತಾಯ್ತನದ ಆಯ್ಕೆಯು ಪರ್ಯಾಯ ಮಾರ್ಗವಾಗಿದೆ. ಬಂಜೆತನದ ಪ್ರಕರಣಗಳಲ್ಲಿ ಮಾತ್ರ ಬಾಡಿಗೆ ತಾಯ್ತನಕ್ಕೆ ದೇಶದಲ್ಲಿ ಅವಕಾಶವಿದೆ.

ಬಾಡಿಗೆ ತಾಯ್ತನದಿಂದ ಯಾರೆಲ್ಲಾ ಮಗುವನ್ನು ಪಡೆಯಬಹುದು?

Vijayaprabha Mobile App free

ದಂಪತಿಗೆ ಮದುವೆಯಾಗಿ 5 ವರ್ಷವಾಗಿರಬೇಕು, 25-50 ವರ್ಷ(ಪತ್ನಿ) & 26-55(ಪತಿ) ವರ್ಷದೊಳಗಿನ ದಂಪತಿಗಳು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಬಹುದು. ಅವರು ಈ ಹಿಂದೆ ಜೈವಿಕ/ದತ್ತು ಪಡೆದ ಮಕ್ಕಳನ್ನು ಹೊಂದಿರಬಾರದು.

ದಂಪತಿಯಲ್ಲಿ ಒಬ್ಬರು ಬಂಜೆತನವನ್ನು ದೃಢೀಕರಿಸುವ ಪ್ರಮಾಣಪತ್ರವನ್ನು ಜಿಲ್ಲಾ ವೈದ್ಯಕೀಯ ಮಂಡಳಿಗೆ ಸಲ್ಲಿಸಬೇಕು. ಮಗುವಿನ ಪಾಲನಾ ಹಕ್ಕುಗಳಿಗೆ ಮ್ಯಾಜಿಸ್ಟ್ರೇಟ್‌ದಿಂದ ಆದೇಶವನ್ನು ಪಡೆದಿರಬೇಕು. ಹೆರಿಗೆಯ ನಂತರ 16 ತಿಂಗಳವರೆಗೆ ಬಾಡಿಗೆ ತಾಯಿಗೆ ವಿಮೆ ಮಾಡಿಸಬೇಕು.

ಬಾಡಿಗೆ ತಾಯ್ತನ: ಸರ್ಕಾರದ ಒಂದಷ್ಟು ಷರತ್ತುಗಳು!

‘ಬಾಡಿಗೆ ತಾಯ್ತನ’ ಕಾಯ್ದೆಯ ದುರುಪಯೋಗವನ್ನು ತಡೆಯಲು ‘ಬಾಡಿಗೆ ತಾಯ್ತನ’ ನೀಡುವವರಿಗೆ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿದೆ.

★ ಬಾಡಿಗೆದಾರರಾಗುವ ಮಹಿಳೆಯು ವಿವಾಹಿತಳಾಗಿರಬೇಕು (ವಿಚ್ಛೇದಿತ ಮಹಿಳೆಯರಿಗೆ ಸಹ ಅನ್ವಯ).
★ ಈ ಹಿಂದೆ ಒಂದು ಮಗುವಿಗೆ ಜನ್ಮ ನೀಡಿರಬೇಕು.
★ ಒಮ್ಮೆ ಮಾತ್ರ ಬಾಡಿಗೆ ತಾಯ್ತನ ಹೊಂದಲು ಅವಕಾಶ.
★ ವಯಸ್ಸು: ಕನಿಷ್ಠ 25 ರಿಂದ 35 ವರ್ಷಗಳ ನಡುವೆ ಇರಬೇಕು.
★ ಬಾಡಿಗೆ ತಾಯ್ತನವನ್ನು ಆಯ್ಕೆ ಮಾಡಿಕೊಳ್ಳುವ ದಂಪತಿಗಳು ನಿಕಟ ಸಂಬಂಧಿಗಳಾಗಿರಬೇಕು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.