Gruhalakshmi scheme : ಕೆಲ ತಾಂತ್ರಿಕ ಸಮಸ್ಯೆಗಳಿಂದ ಗೃಹಲಕ್ಷ್ಮಿ ಹಣ ಜಮಾ ವಿಳಂಬವಾದರೂ, ಅಧಿಕಾರಿಗಳು ಶೀಘ್ರದಲ್ಲೇ ಹಣ ಖಾತೆಗೆ ಬರುತ್ತದೆ ಎಂದು ಖಚಿತಪಡಿಸಿದ್ದಾರೆ. ಆದರೆ, ಹಣ ಬಂದಿದೆಯೇ ಎಂದು ಪರಿಶೀಲಿಸಲು ಸರಳ ಆನ್‌ಲೈನ್ ಮಾರ್ಗಗಳಿವೆ.
ಹೌದು, DBT Karnataka ಈ ಆಂಡ್ರಾಯ್ಡ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ, ಆಧಾರ್ ನಂಬರ್ ಹಾಕಿ OTP ಮೂಲಕ ಲಾಗಿನ್ ಮಾಡಿದ ನಂತರ ಆ ಬಳಿಕ ಹೋಂ ಪೇಜ್‌ನಲ್ಲಿರುವ Payment Status ಆಯ್ಕೆ ಮಾಡಿದರೆ, ಈಗಾಗಲೇ ಬಂದಿರುವ ನೇರ ನಗದು ವರ್ಗಾವಣೆಯ ವಿವರಗಳು ಕಾಣಿಸುತ್ತವೆ.
Gruhalakshmi scheme : ಗೃಹಲಕ್ಷ್ಮಿ ಹಣ ಖಾತೆಗೆ ಬಾರದಿದ್ದರೆ ಏನು ಮಾಡಬೇಕು?
ಒಂದು ವೇಳೆ ಗೃಹಲಕ್ಷ್ಮಿ ಹಣ ಖಾತೆಗೆ ಬಾರದಿದ್ದರೆ ಹತ್ತಿರದ CDPO ಕಚೇರಿ ಅಥವಾ ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕು.
ಭೇಟಿ ನೀಡುವ ವೇಳೆ ಆಧಾರ್ ಕಾರ್ಡ್, ಬ್ಯಾಂಕ್ ವಿವರ, ರೇಷನ್ ಕಾರ್ಡ್ ಹಾಗೂ ಆಧಾರ್ ಲಿಂಕ್ ಮೊಬೈಲ್ ನಂಬರ್ ತೆಗೆದುಕೊಂಡು ಹೋಗುವುದು ಅಗತ್ಯ. ಇನ್ನು, ಸರ್ಕಾರವು ಸಹಾಯಕ್ಕಾಗಿ ಟೋಲ್-ಫ್ರೀ ನಂಬರ್ 190700192216 ಹಾಗೂ 080-22279954 ಸೇರಿದಂತೆ ಇತರೆ ಸಂಪರ್ಕ ಸಂಖ್ಯೆಗಳನ್ನೂ ಒದಗಿಸಿದ್ದು, ಈ ಮೂಲಕ ಯೋಜನೆಯ ಫಲಾನುಭವಿಗಳು ತಮ್ಮ ಹಣದ ಸ್ಥಿತಿಯನ್ನು ತಿಳಿದುಕೊಳ್ಳಬಹುದು.




