ಕರ್ನಾಟಕ ಹಿಂದುಳಿದ ಜಿಲ್ಲೆಗಳಲ್ಲಿ ಬಡ ಮತ್ತು ಮಧ್ಯಮ ವರ್ಗದವರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಅನಿಲ ಭಾಗ್ಯ ಯೋಜನೆಯನ್ನು ಪ್ರಾರಂಭಿಸುವುದಕ್ಕೆ ಚಿಂತನೆ ನಡೆಸಿದೆ.
ಬಿಪಿಎಲ್ ಕಾರ್ಡ ಇರುವವರು ಉಚಿತ ಎಲ್‌ಪಿಜಿ ಸಂಪರ್ಕ ಪಡೆಯಬಹುದು. karnataka.gov.in ಅಧಿಕೃತ ವೆಬ್‌ಸೈಟ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ಅರ್ಜಿದಾರರ ವಿವರಗಳು SECC-2011 ಅಂಕಿ ಅಂಶಗಳ ಜೊತೆಗೆ ಹೊಂದಿಕೆಯಾಗಬೇಕು. ಒಂದು ವೇಳೆ ಕೇಂದ್ರದ ಯೋಜನೆ ಅಡಿ ಪ್ರಯೋಜನ ಪಡೆದಿದ್ದರೆ ಅಂಥ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
ಅನಿಲ ಭಾಗ್ಯ ಯೋಜನೆಯ ಪ್ರಾಮುಖ್ಯತೆ:
ಉಜ್ವಲ ಯೋಜನೆ ಅಡಿ ಒಳಪಡಲಾರದವರಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ
ಕೇಂದ್ರದ ಉಜ್ವಲ ಯೋಜನೆ ವ್ಯಾಪ್ತಿಗೆ ಒಳಪಡದವರಿಗೆ ಉಚಿತ ಒಲೆ ನೀಡಲಾಗುತ್ತದೆ
ಈ ಯೋಜನೆ ಅಡಿ1ಕುಟುಂಬಕ್ಕೆ 1,920 ರೂ ಸಬ್ಸಿಡಿ ನೀಡಲಾಗುತ್ತದೆ
ಈ ಯೋಜನೆಯಿಂದ 5 ಲಕ್ಷಕ್ಕೂ ಅಧಿಕ ಕುಟುಂಬಗಳು ಲಾಭ ಪಡೆಯುವ ಅಂದಾಜು ಇದೆ LPG ಹೊಗೆರಹಿತವಾಗಿದ್ದು, ಇದು ಅಡುಗೆಯ ಆರ್ಥಿಕ ಸಮರ್ಥನೀಯ ವಿಧಾನವಾಗಿದೆ.
ಈ ಯೋಜನೆಯ ಮಾನದಂಡಗಳೇನು?:
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಇದರ ಲಾಭ ದೊರೆಯಲಿದೆ ಪಡಿತರ ಚೀಟಿದಾರರು ಅರ್ಹರಾಗಿರುತ್ತಾರೆ
ಆಧಾರ್ ಸಂಖ್ಯೆ ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಬಹುದು ಉಜ್ವಲ ಯೋಜನೆಯ ಫಲಾನುಭವಿಗಳು
ಇದರ ಲಾಭ ಪಡೆಯಲು ಸಾಧ್ಯವಿಲ್ಲ ಅರ್ಜಿ ಸಲ್ಲಿಸಿದ ಬಳಿಕ, ಸಾಮಾಜಿಕ ಆರ್ಥಿಕ ಜಾತಿ ಗಣತಿ 2011 ರ ಡೇಟಾದೊಂದಿಗೆ ಮರುಪರಿಶೀಲನೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವವರು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಉಚಿತ ಎಲ್‌ಪಿಜಿ ಸಂಪರ್ಕವನ್ನು ಪಡೆದುಕೊಂಡಿರಬಾರದು.